ಬತ್ತಿದ ಕಡುಬಿನ ಕೆರೆ, ಸೊರಗಿದ ಮೂನ್ನೂರು ಎಕ್ರೆ ಕೃಷಿ ಭೂಮಿ

0
292

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಶಾಕಿಂಗ್ ನ್ಯೂಸ್ ನೀವು ಒದಲೆಬೇಕು. ಬತ್ತಿದ ಕಡುಬಿನ ಕೆರೆ, ಸೊರಗಿದ ಸುಗ್ಗಿ ಬೆಳೆ ತೆನೆ ಬರುವ ಮುನ್ನವೆ ಕೆರೆ ಕಾಲಿ ಮೂನ್ನೂರು ಎಕ್ರೆ ಕೃಷಿ ಸೊರಗಿದೆ ನೋಡಿ.

      

ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಡುಬಿನ ಕೆರೆ 7.30 ಎಕ್ರೆ ವಿಸ್ತಿರ್ಣ ಹೊಂದಿದ್ದು ವಿಶಾಲವಾಗಿ ಮೈ ತೇರೆದು ಕೊಂಡಿದೆ. ಕೆರೆಯ ನೀರನ್ನೆ ನಂಬಿ ಹೊಸಾಡು ಬೈಲಿನ ರೈತರು ಕಾತಿ ಆದ ಕೂಡಲೆ ಸುಗ್ಗಿ ಬೆಳೆಯನ್ನು ಬೆಳೆಯುತ್ತಾ ಬಂದಿರುತ್ತಾರೆ. ಆದರೆ ಈ ಬಾರಿ ಕದಿರು(ತೇನೆ)ಬರುವ ಮುನ್ನವೆ ಕೆರೆಯ ವಡಲು ಬರಿದಾಗಿ ಬೆಳೆ ಸೊರಗಿ ಕೆಂಪಾಗಿ ಹೋಗಿದೆ.

ಏಳುವರೆ ಎಕ್ರೆ ವಿಸ್ತಾರ ಹೊಂದಿದ ಕಡುಬಿನ ಕೆರೆಯಲ್ಲಿ ಹುಳು ಮಣ್ಣು ದಟ್ಟವಾಗಿ ತುಂಬಿದೆ. ಹಲವಾರು ವರ್ಷಗಳಿಂದ ಕೆರೆಯಲ್ಲಿ ಸಂಗ್ರಹವಾದ ಹುಳು ಮಣ್ಣು ತೆಗೆಯದೆ ಇರುವುದರಿಂದ ಕೆರೆ ಬೆಟ್ಟಾಗಿ ನೀರಿನ ಸಂಗ್ರಹ ಕುಸಿದಿದೆ ಎಂದು ರೈತರು ಹೇಳುತ್ತಾರೆ.

ಇಷ್ಟೊಂದು ಪ್ರಮಾಣ ನೀರು ಕಡಿಮೆ ಆಗಿದ್ದು ಇದೆ ಮೊದಲು ಎಂದು ತಮ್ಮ ಅಳಲನ್ನು ಹೇಳಿಕೊಳ್ಳುತ್ತಾರೆ. ಒಂದು ಎಕರೆ ಬೇಸಾಯ ಮಾಡಲು ಸರಿಸುಮಾರು ಒಂಭತ್ತು ಸಾವಿರ ರೂಪಾಯಿ ತಗುತಲ್ಲಿದ್ದು ಭರವಸೆಯಿಂದ ಮಾಡಿದ ಬೆಳೆ ಕಣ್ಣೆದುರೆ ನಾಶವಾಗಿದೆ‌,ಹಾಕಿದ ಹಣ ಮತ್ತು ಶ್ರಮ ಮಣ್ಣು ಪಾಲಾಗಿದೆ ಎಂದು ಕಣ್ಣಂಚಲಿ ರೈತರು ನೀರನ್ನು ಹರಿಸುತ್ತಾ ಅಳಲನ್ನು ತೋಡಿಕೊಂಡಿದ್ದಾರೆ. ಚಾಪೆಮಾದರಿ ಕ್ರಷಿ ಪದ್ದತಿಯನ್ನು ಅಳವಡಿಸಿಕೊಂಡು ಯಂತ್ರದ ಮೂಲಕ ನಾಟಿ ಮಾಡಿದ ಪೈರು ಕಣ್ಣೆದುರು ಕೆಂಪಾಗಿ ಇರುವುದನ್ನು ನೋಡಿದ ರೈತರ ಕಣ್ಣುಗಳು ಮಂಜಾಗಿ ಹೋಗಿದೆ.

ಹಲವಾರು ಬಾರಿ ಮನವಿ ಮಾಡಿದರು ಕೇರೆ ಉಳಲನ್ನು ತೆಗೆಯಲಿಲ್ಲ. ಸಣ್ಣ ನೀರಾವರಿ ಇಲಾಖೆ ಅಧಿನಕ್ಕೆ ಒಳಪಟ್ಟ ಕೆರೆ ಹದಿನೈದು ವರ್ಷಗಳ ಹಿಂದೆಯೆ ಒಮ್ಮೆ ಕೆರೆಯ ಉಳನ್ನು ತೆಗೆದ ನೆನಪು ಇದೆ ರೈತರು ಅಲ್ಲಿಂದ ಇಲ್ಲಿಯವರೆಗೆ ಕೆರೆಯ ಕಡೆಗೆ ಯಾರು ಕೂಡ ನೋಡಲಿಲ್ಲ ಕೆರೆ ಅಭಿವೃದ್ಧಿ ಮಾಡಲಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಕಳೆದ ವರ್ಷ ಸಣ್ಣ ನೀರಾವರಿ ಇಲಾಖೆಗೆಗೆ, ಶಾಸಕರಿಗೆ ಮನವಿಯನ್ನು ಮಾಡಲಾಗಿತ್ತು.ಅದಕ್ಕೆ ಪೃತಿಯಾಗಿ ಸಣ್ಣ ನೀರಾವರಿ ಇಲಾಖೆಯಿಂದ ಸ್ವಿಕೃತಿ ಪೃತಿ ಬಂದಿದ್ದು ಬಿಟ್ಟರೆ ಮತ್ತೆ ಇದರ ಬಗ್ಗೆ ಕ್ರಮ ಆಗಿಲ್ಲ ಎಂದು ರೈತರು ಹೇಳುತ್ತಾರೆ.

 ಕೂಡಲೆ ಕೆರೆ ಹುಳನ್ನು ಎತ್ತಬೇಕು ಕೆರೆ ಅಭಿವೃದ್ಧಿಗೊಳ್ಳಬೇಕು,ಮಾನ್ಯ ಸಂಸದರು,ಮಾನ್ಯ ಶಾಸಕರು, ತಾಲೂಕಿನ ದಂಡಾಧಿಕಾರಿ,ಕೃಷಿ ಅಧಿಕಾರಿಗಳು ಹೊಸಾಡು ಬೈಲಿಗೆ ಬೆಟಿಕೊಟ್ಟು ಬೆಳೆ ಸಮೀಕ್ಷೆಮಾಡಿ ಬೆಳೆ ಪರಿಹಾರ ಕೊಟ್ಟು,ಕೆ ರೆ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕ್ಕೆಂದು ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ವರದಿ: ಜಗದೀಶ.ದೇವಾಡಿಗ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)