ರಾಮಕೃಷ್ಣ ಮಿಷನ್ ಸ್ವಚ್ಚ ಉಡುಪಿ ಮತ್ತು ಹೊಸಾಡು ಗ್ರಾಮ ಪಂಚಾಯತ್ ಹೊಸಾಡು ಇದರ ಆಶ್ರಯದಲ್ಲಿ ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳಿಕಟ್ಟೆ ಪೇಟೆ ಪರಿಸರದಲ್ಲಿ ಸ್ವಚ್ಛ ಭಾರತ ಕಾರ್ಯಕ್ರಮ ನಡೆಯಿತು.
ಸುಮಾರು ಐದು ಲೋಡ್ ಗುಡ್ ರಿಕ್ಷಾ ಕಸವನ್ನು ಪೇಟೆ ಪರಿಸರದಲ್ಲಿ ಹೆಕ್ಕಿ ಎಸ್.ಎಲ್.ಆರ್.ಎಮ್ ಘಟಕ ಮುಳ್ಳಿಕಟ್ಟೆ-ತ್ರಾಸಿ ಘಟಕಕ್ಕೆ ವಿಲೆವಾರಿ ಮಾಡಲಾಯಿತು ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಪೂಜಾರಿ ಅರಾಟೆ ಇವರು ಸ್ವಚ್ಚಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.
ಹೊಸಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ವನಂದನ ಖಾರ್ವಿ ಕಂಚಗೋಡು, ಪಿಡಿಒ, ಸದಸ್ಯರಾದ ಶೀತರಾಮ ಶೆಟ್ಟಿ ಮುಳ್ಳಿಕಟ್ಟೆ, ರಮೇಶ್ ಆಚಾರಿ ಅರಾಟೆ, ಶಕುಂತಲಾ, ಶಶಿಕಲಾ ಆಚಾರಿ, ಸುಶೀಲ ಮೊಗವೀರ ಅರಾಟೆ ಉಪಸ್ಥಿತರಿದ್ದರು.
ಊರಗ್ರಾಮಸ್ಥರಾದ ರವಿಆಚಾರಿ, ಉಮೇಶ್, ಸಂತೋಷ ಮೊಗವೀರ, ಯೋಗಿಶ್, ಜಗದೀಶ ದೇವಾಡಿಗ ಮುಳ್ಳಿಕಟ್ಟೆ, ವಿಠಲ ಭಂಡಾರಿ,ಶೆಖರಶೆಟ್ಟಿ, ರಘಪೂಜಾರಿ, ಕಾರ್ಮನ್ನ್ ಅಮ್ಮ, ಸರಸ್ವತಿ, ಶಾಂತಾರಾಮ್, ಶರತ್ ಕುಮಾರ್ ಶೆಟ್ಟಿ, ಮೊದಲಾದವರು ಇವೋಂದು ಸ್ವಚ್ಚ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಂಚಾಯತ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಕೈ ಜೋಡಿಸಿದರು ಅಂಗಡಿ ಮಾಲಕರಿಗೆ ಮತ್ತು ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಅರಿವನ್ನು ಮೂಡಿಸಲಾಯಿತು.