ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಚಾಲೆಂಜ್ ಮಾಡಿದ ಹಿಂದು-ಮುಸ್ಲಿಂ ಜೋಡಿ

0
296

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ(ಜ.29): ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ‘ಹಿಂದು ಹೆಣ್ಣನ್ನು ಮುಟ್ಟುವ ಕೈಗಳನ್ನು ಕಡಿದು ಹಾಕಬೇಕು’ ಎಂಬ ಹೇಳಿಕೆ ತೀವ್ರ ವಿವಾದವನ್ನು ಸೃಷ್ಟಿಸಿದೆ.

ಅನಂತ್ ಮಾತೆತ್ತಿದ್ರೆ ಸಮಾಜವನ್ನು ಒಡೆಯುವ, ಸಮಾಜದಲ್ಲಿ ಅಶಾಂತಿ ಹರಡುವ ಕೆಲಸವನ್ನೇ ಮಾಡುತ್ತಾರೆ ಎಂದು ಹಲವರು ಅವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಈ ಮಧ್ಯೆ ಹಿಂದು ಹೆಣ್ಣನ್ನು ಮುಟ್ಟುವ ಕೈಗಳನ್ನು ಕಡಿಯುತ್ತೀವಿ..ಎಂಬ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆ ಹಿಂದು-ಮುಸ್ಲಿಂ ಜೋಡಿಯೊಂದು ಚಾಲೆಂಜ್ ಮಾಡಿದೆ.

 ಹೌದು, ಅನಂತ್ ಅವರ ಹೇಳಿಕೆ ವಿರೋಧಿಸಿ ತೆಹಸೀನ್ ಪೂನಾವಾಲಾ ಎಂಬುವವರು ಟ್ವೀಟ್ ಮಾಡಿದ್ದು, ಅದರಲ್ಲಿ ತಮ್ಮ ಹಿಂದು ಪತ್ನಿಯ ಜೊತೆ ಇರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.’ಅನಂತ್ ಅವರೇ ನಾನು ಹಿಂದು ಹೆಣ್ಣನ್ನು ಮುಟ್ಟಿದ್ದೇನೆ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ. ಇದು ನನ್ನ ಚಾಲೆಂಜ್ ಎಂದು ತೆಹಸೀನ್ ಪೂನಾವಾಲಾ ಟ್ವೀಟ್ ಮಾಡಿದ್ದಾರೆ.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)