ವಿಜ್ಞಾನ ಮಾದರಿಯಲ್ಲಿ ವಿನ್ಯಾಸ್.ವಿ.ಶೆಟ್ಟಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0
171

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೇಂದ್ರ ಸರಕಾರದ ಇನ್‍ಸ್ಪೈರ್ ಅವಾರ್ಡ ಕಾರ್ಯಕ್ರಮದಡಿಯಲ್ಲಿ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಭೇತಿ ಇಲಾಖೆ ಬೆಂಗಳೂರು ಇವರು ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ಮಾದರಿಗಳ ಪ್ರದರ್ಶನದಲ್ಲಿ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ವಿನ್ಯಾಸ್.ವಿ.ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇಕೋ ಪ್ರೆಂಡ್ಲಿ ಹೈಬ್ರಿಡ್ ಟೆಕ್ನಾಲಜಿ ಬೈಸಿಕಲ್ ಎನ್ನುವ ಮಾದರಿಯನ್ನು ಸಿದ್ದಪಡಿಸಿದ್ದು. ಈ ಮಾದರಿಯನ್ನು ತಯಾರಿಸುವಲ್ಲಿ ಉಪ್ಪುಂದ ಸ.ಪ.ಪೂ ಕಾಲೇಜಿನ ಅಧ್ಯಾಪಕರಾದ ಧರ್ಮೇಂದ್ರ ಹಳೆಮಠ ಇವರು ತಾಂತ್ರಿಕ ಮಾರ್ಗದರ್ಶನ ಪಡೆದಿದ್ದು, ಹಾಗೂ ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಾಪಕ ಸುಕುಮಾರ ಶೆಟ್ಟಿಯವರಿಂದ ಶಾಸ್ತ್ರೀಯ ಮಾರ್ಗದರ್ಶನ ಪಡೆದಿರುತ್ತಾನೆ.

ಬೈಂದೂರು ವಲಯದಿಂದ ಇನ್‍ಸ್ಪೈರ್ ಅವಾರ್ಡ್‍ಗಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಮೊದಲ ವಿಜ್ಞಾನ ಮಾದರಿ ಇದಾಗಿದೆ.
ಇವನು ಸ.ಪ.ಪೂ.ಕಾಲೇಜು ಕಂಬದಕೋಣೆ ಇಲ್ಲಿನ ಅಧ್ಯಾಪಕ ವಿಶ್ವನಾಥ ಶೆಟ್ಟಿ ಮತ್ತು ರಶ್ಮೀ ವಿ ಶೆಟ್ಟಿ ದಂಪತಿಯ ಪುತ್ರ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (8) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)