ಜೆಸಿಐ ಉಪ್ಪುಂದ 2019 ನೇ ಸಾಲಿನ ಪದಗ್ರಹಣ ಸಮಾರಂಭ, ಅಧ್ಯಕ್ಷರಾಗಿ ಪುರಂದರ್ ಖಾರ್ವಿ ಅಧಿಕಾರ ಸ್ವೀಕಾರ

0
317

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜೆ.ಸಿ.ಐ ಉಪ್ಪುಂದ ಇದರ 2019ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಉಪ್ಪುಂದದ ಮಾತೃಶ್ರೀ ಸಭಾಭವನದಲ್ಲಿ ನೆಡೆಯಿತು.

ಜೆಸಿಐಗೆ ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಜೇಸಿಐ ವಲಯ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರುರವರು, ಜೆಸಿಐಯಲ್ಲಿ ತೊಡಗಿಕೊಂಡಲ್ಲಿ ಸಮಾಜಮುಖಿ ಕೆಲಸ ಮಾಡಲು ಸಾಧ್ಯವಿದೆ. ಇದರಲ್ಲಿ ತೊಡಗಿಕೊಂಡವರು ತಾವು ವ್ಯಕ್ತಿತ್ವ ವಿಕಸನ ಹೊಂದುವುದರೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯವಿದೆ ಎಂದರು.

ಇಂದಿನ ಪದಗ್ರಹಣ ಸಮಾರಂಭದಲ್ಲಿ ಹಲವು ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ವಲಯ ಮಟ್ಟದಲ್ಲಿಯೇ ಅತ್ಯಂತ ಹೆಚ್ಚಿನ ಸದಸ್ಯರನ್ನು ಹೊಂದಿರುವ ಮತ್ತು ಬಹಳ ಚುರುಕುತನದಲ್ಲಿ ಕಾರ್ಯ ಮಾಡುತ್ತಿರುವ ಸಂಸ್ಥೆಯಾಗಿ ಉಪ್ಪುಂದ ಜೇಸಿಐ ಮೂಡಿಬಂದಿದೆ. ನೂತನ ಅಧ್ಯಕ್ಷ ಪುರಂದರ ಖಾರ್ವಿಯವರ ಅಧ್ಯಕ್ಷತೆಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯಅತಿಥಿಗಳಾಗಿ ಪತ್ರಕರ್ತರಾದ ಜಾನ್ ಡಿ’ಸೋಜಾ, ಉಪ್ಪುಂದ-ಬೈಂದೂರು ಲಯನ್ಸ್ ಕ್ಲಬ್‍ನ ಪೂರ್ವಾಧ್ಯಕ್ಷ ಜಿ. ಗೋಕುಲ ಶೆಟ್ಟಿ, ವಲಯ ಉಪಾಧ್ಯಕ್ಷ ಅಬ್ದುಲ್ ಜಬ್ಬರ್ ಸಾಹೇಬ್, ಜೇಸಿರೆಟ್ ಅಧ್ಯಕ್ಷೆ ಸಂಗೀತಾ ಪುರಂದರ ಖಾರ್ವಿ,ಜೆಸಿಐ ಉಪ್ಪುಂದದ ಪೂರ್ವಾಧ್ಯಕ್ಷ ಮಂಜುನಾಥ್ ದೇವಾಡಿಗ, ಜೂನಿಯರ್ ಜೇಸಿ ಅಧ್ಯಕ್ಷೆ ಪ್ರಫುಲ್ಲಾ ದೇವಾಡಿಗ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಪುರಂದರ ಖಾರ್ವಿಯವರು ಪದಗ್ರಹಣ ಸ್ವೀಕರಿಸಿ ಮಾತನಾಡಿ,2019ನೇ ಸಾಲಿನ ಅಧ್ಯಕ್ಷನಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಎಲ್ಲರ ಸಹಕಾರ ಸದಾ ಹೀಗೆ ಇರಲಿ ಎಂದು ಹೇಳಿದರು.

ಪೂರ್ವಾಧ್ಯಕ್ಷರಾದ ಜೆ.ಎಫ್.ಎಮ್. ಮಂಗೇಶ ಶಾನುಭಾಗರವರು ಜೆಸಿಐ ಚಾರಿಟೇಬಲ್ ಟ್ರಸ್ಟಿಗೆ 10,000 ರೂಪಾಯಿ ದೇಣಿಗೆಯನ್ನು ನೀಡಿದರು.

ಹೊಸದಾಗಿ ಸೇರ್ಪಡೆಗೊಂಡ ಸದಸ್ಯರನ್ನು ಪೂರ್ವಾಧ್ಯಕ್ಷರಾದ ಸುಬ್ರಮಣ್ಯ ಜಿ ಅವರು ಸಭೆಗೆ ಪರಿಚಯಿಸಿದರು.

ಜೇಸಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ 2019ನೇ ಸಾಲಿನ ಕಾರ್ಯಕ್ರಮಗಳ ವಿವರ ವಾಚಿಸಿದರು.

ಜೇಸಿಐ ಉಪ್ಪುಂದ ಪೂರ್ವಾಧ್ಯಕ್ಷ ಪ್ರಶಾಂತ ಪೂಜಾರಿ ಸ್ವಾಗತಿಸಿದರು, ಕಾರ್ಯದರ್ಶಿ ಜೇಸಿ ದೇವರಾಯ ಕೆರ್ಗಾಲ್ ವಂದಿಸಿದರು.

ಶಾಲಾ ಕಾಲೇಜುಗಳ ಅಧ್ಯಾಪಕರು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ಪುರುಷೋತ್ತಮ ಉಪ್ಪುಂದ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)