ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : “ಮಾಯೆ” ತುಳು ಆಲ್ಬಂ ಹಾಡು ಬಿಡುಗಡೆ

0
229

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (3) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಜಿಲ್ಲಾ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಸಹಕಾರದೊಂದಿಗೆ ಬೋಳ ಗರಡಿ ಫ್ರೆಂಡ್ಸ್ ಇವರ ನೇತೃತ್ವದಲ್ಲಿ ಅಂತರಾಷ್ಟ್ರೀಯ ಚಿನ್ನದ ಪದಕ ವಿಜೇತ ಕರಾಟೆಪಟು ಬೋಳ ರಾಕೇಶ್ ಪೂಜಾರಿಯವರ ಸಾರಥ್ಯದಲ್ಲಿ ನಾನಿಲ್ತಾರ್ ಕುಲಾಲ ಸಂಘದ ಯುವ ವಿಭಾಗದ ಅಧ್ಯಕ್ಷರಾದ ಬೆಳ್ಮಣ್ಣು ದೀಪಕ್ ಕುಲಾಲ್‍ರವರ ನಿರ್ಮಾಪಕತ್ವದಲ್ಲಿ ಮೂಡಿ ಬಂದ ಮಿತ್ತೂರು ವಿಶ್ವನಾಥ್ ಕುಲಾಲ್‍ರವರು ಸಂಗೀತ ರಚಿಸಿರುವ ಸಚ್ಚೇರಿಪೇಟೆ ಕೆ.ಪಿ.ಮಿಲನ್‍ರವರ ಸುಮಧುರ ಕಂಠಸಿರಿಯ ಸಂಗೀತದ ಬೋಳ ಭರತ್ ಪೂಜಾರಿಯವರ ಸಂಪಾದಕತ್ವದಲ್ಲಿ ಮೂಡಿ ಬಂದ ಇತಿಹಾಸ ಪ್ರಸಿದ್ಧ ಬೋಳ ಮಲ್ಲಿಗೆ ಶ್ರೀ ಬ್ರಹ್ಮಬೈದರ್ಕಳ ಗರಡಿಯ ನೇಮೋತ್ಸವದ ನೆನಪುಗಳನ್ನು ನೆನಪಿಸುವಂತಹ ಅತ್ಯಧ್ಬುತ ದೃಶ್ಯಗಳನೊಳಗೊಂಡ ಹೊಚ್ಚ ಹೊಸ ತುಳು ಆಲ್ಬಂ ಹಾಡು “ಮಾಯೆ” ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ರಂಗಮಂದಿರದಲ್ಲಿ ಖ್ಯಾತ ಜ್ಯೋತಿಷ್ಯರಾದ ಕೆದಿಂಜೆ ಶ್ರೀ ವಾಸುದೇವ ಹೆಬ್ಬಾರ್‍ರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ನಂದಳಿಕೆ ರಾಜೇಶ್ ಕೋಟ್ಯಾನ್, ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಹಾಗೂ ಮಾಯೆ ಕಿರುಚಿತ್ರ ತಂಡದ ಸದಸ್ಯರಾದ ಸಂದೀಪ್ ಕುಲಾಲ್, ನಿತೇಶ್ ಕುಲಾಲ್ ಮೊದಲಾದವರಿದ್ದರು.

ವರದಿ : ರಕ್ಷಿತ್ ಶೆಟ್ಟಿ ವಂಡ್ಸೆ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (5) ಸಮ್ಮತ (0) ಅಸಮ್ಮತ (3) ಖಂಡಿಸುವೆ (0) ಅಭಿಪ್ರಾಯವಿಲ್ಲ (0)