ನಡುರಸ್ತೆಯಲ್ಲೇ ಲಾಡ್ಜ್ ಮ್ಯಾನೇಜರ್ ಕತ್ತು ಸೀಳಿ ಬರ್ಬರ ಹತ್ಯೆ!

0
201

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಲಬುರಗಿ : ದುಷ್ಕರ್ಮಿಗಳು ವ್ಯಕ್ತಿಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಸಮೀಪ ನಡೆದಿದೆ.

ಕಲಬುರಗಿ ನಗರದ ಕಾವೇರಿ ಲಾಡ್ಜ್ ಮ್ಯಾನೇಜರ್, ಮೇಳಕುಂದ ಗ್ರಾಮದ ನಿವಾಸಿ ಮಲ್ಲಿಕಾರ್ಜುನ್ (29) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಇಂದು ಬೆಳ್ಳಂಬೆಳಗ್ಗೆ ಮೂವರು ದುಷ್ಕರ್ಮಿಗಳು ಕಾವೇರಿ ಲಾಡ್ಜ್ ಬಳಿ ಬಂದು ಮಲ್ಲಿಕಾರ್ಜುನ್ ಜೊತೆ ಮಾತನಾಡಿದಂತೆ ನಟಿಸಿ, ಮಾರಕಾಸ್ತ್ರದಿಂದ ಆತನ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮರಾದಲ್ಲಿ ದುಷ್ಕರ್ಮಿಗಳ ಅಟ್ಟಹಾಸ ಸೆರೆಯಾಗಿದ್ದು, ಸಿಸಿಟಿವಿ ಆಧಾರದ ಮೇಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)