ಬೈಂದೂರು : ಉಚಿತ ರಕ್ತದಾನ ಶಿಬಿರ ಹಾಗೂ ಅಂಗವಿಕಲರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ, ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕಿದೆ : ಎಸ್.ಜಯಕರ ಶೆಟ್ಟಿ

0
221

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಬೈಂದೂರು : ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೈಂದೂರು, ಭಾರತೀಯರ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ, ಕುಂದಾಪುರ, ಶ್ರೀ ಮಾರಿಕಾಂಬಾ ಯೂತ್  ಕ್ಲಬ್ (ರಿ)  (ಹವ್ಯಾಸಿ ಕಲಾತಂಡ) ಕಳವಾಡಿ ಬೈಂದೂರು ಹಾಗೂ ಜೆಸಿಐ ಉಪ್ಪುಂದ ಇವರ ಜಂಟಿ ಆಶ್ರಯದಲ್ಲಿ ದಿವಂಗತ ಪುನೀತ ಪೂಜಾರಿಯ 22ನೇ ವರ್ಷದ ಅಂಗವಾಗಿ ಉಚಿತ ರಕ್ತದಾನ ಶಿಬಿರ ಹಾಗೂ ಅಂಗವಿಕಲರಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವು  ಜೆ ಎನ್ ಆರ್ ಕಲಾಮಂದಿರ ಯಡ್ತರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಚೇರ್‍ಮೆನ್  ಜಯಕರ್ ಶೆಟ್ಟಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಕಾಡುತ್ತಿದ್ದು ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕಿದೆ. ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಹತ್ತಾರು ಜನರ ಪ್ರಾಣ ಉಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಸ್ತವಿಕ ಮಾತನಾಡಿದ ಆಕಾಶ ಉಚಿತ ರಕ್ತದಾನ ಶಿಬಿರವನ್ನು ದಿವಂಗತ ಪುನೀತ್ ಪುಜಾರಿಯವರ  22ನೇ ಜನ್ಮದಿನ ಅಂಗವಾಗಿ ನಡೆಸಲಾಗಿದ್ದು. ಅವರು ಪ್ರತಿ ವರ್ಷ ಜನ್ಮದಿನದಂದು ಉಚಿತವಾಗಿ ರಕ್ತದಾನ ಮಾಡುತ್ತಿದ್ದು ಅದರ ನೆನಪಿಗಾಗಿ ಇಂದು ಉಚಿತ ರಕ್ತದಾನ ಶಿಬಿರ ನೆಡಸಲಾಗಿದೆ ಎಂದು ಪ್ರಾಸ್ತವಿಕ ಮಾತುಗಳನ್ನು ನುಡಿದರು.

ತದನಂತರ ಮುಖ್ಯ ಅತಿಥಿಗಳಿಂದ ಅಂಗವಿಕಲರಿಗೆ ಉಚಿತ ಸೈಕಲ್ ವಿತರಣೆ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ವೈಧ್ಯಾಧಿಕಾರಿ ಎಚ್.ಎಸ್ ಮಲ್ಲಿ, ಉಪ್ಪುಂದ ಜೆಸಿಐ ಅಧ್ಯಕ್ಷ ಪುರಂದರ ಖಾರ್ವಿ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೈಂದೂರು ಅಧ್ಯಕ್ಷ ಸುಕೇಶ ಪೂಜಾರಿ,ಶ್ರೀ ಮಾರಿಕಾಂಬ ಯೂತ್ ಕ್ಲಬ್ (ರಿ) ಕಳವಾಡಿ ಅಧ್ಯಕ್ಷರು ಸುಬ್ರಹ್ಮಣ್ಯ ಪೂಜಾರಿ ಕಳವಾಡಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಂಯೋಜಕರು ಮುತ್ತಯ್ಯ ಶೆಟ್ಟಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಕೋಶಾಧಿಕಾರಿ ಶಿವರಾಮ್ ಶೆಟ್ಟಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಗಣೇಶ್ ಆಚಾರಿ, ಶ್ರೀನಿವಾಸ ಪೂಜಾರಿ ತಗ್ಗರ್ಸೆ, ಬೈಂದೂರು ಜೆಸಿರೇಟ್ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು ಹಾಗೂ ವಿವಿಧ ಸಂಸ್ಥೆಯ ಸದಸ್ಯರುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಸಾದ ಪೂಜಾರಿ ನಿರೂಪಿಸಿದರು, ಪ್ರದೀಪ ಶೆಟ್ಟಿ ಕಾರಿಕಟ್ಟೆ ವಂದಿಸಿದರು.

             

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (2) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)