ನಾಪತ್ತೆಯಾದ ಏಳು ಮೀನುಗಾರರ ಪತ್ತೆಗೆ ಇಸ್ರೋಗೆ ಮೊರೆ

0
128

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಉಡುಪಿ : ಮಲ್ಫೆ ಬಂದರಿನಿಂದ ಆಳ ಸಮುದ್ರಕ್ಕೆ ಮೀನುಗಾರಿಕಗೆ ತೆರಳಿದ್ದ 7 ಮೀನುಗಾರರು ನಾಪತ್ತೆಯಾಗಿದ್ದು, ಮೀನುಗಾರರ ಪತ್ತೆ ಕಾರ್ಯಕ್ಕಾಗಿ ಜಿಲ್ಲಾ ಪೊಲೀಸ್ ಭಾರತೀಯ ಬಾಹ್ಯಕಾಶ ಸಂಶೋಧನಾ ಕೇಂದ್ರದ ಮೊರೆ ಹೋಗಿದೆ.
 
ಉಪಗ್ರಹದ ಮೂಲಕ ಪತ್ತೆ ಹಚ್ಚುವ ನಿಟ್ಟಿನಲ್ಲಿ ಈ ಕುರಿತು ಮಾಹಿತಿಯನ್ನು ಇಸ್ರೋ, ಹೈದರಾಬಾದ್ ನ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಶಿಯನ್ ಇನ್ಫಾರ್ಮೆಶನ್ ಸಿಸ್ಟಮ್ ಮತ್ತು ಬೆಂಗಳೂರಿನ ರಾಜ್ಯ ರಿಮೋಟ್ ಸೆನ್ಸಿಂಗ್ಸ್ ಅಪ್ಲಿಕೇಶನ್ ಸೆಂಟರ್ ಗೆ ಮಾಹಿತಿ ರವಾನಿಸಲಾಗಿದೆ.
 
ಕಳೆದ 25 ದಿನಗಳಿಂದ ಆಳ ಸಮುದ್ರದಲ್ಲಿ ನಾಪತ್ತೆಯಾಗಿರುವ ಬೋಟ್ ಸಹಿತ ಏಳು ಮಂದಿ ಪತ್ತೆಗೆ ಕಾರ್ಯಾಚರಣೆಯನ್ನು ಕೋಸ್ಟ್ ಗಾರ್ಡ್ ಹಾಗೂ ನೌಕಾ ಪಡೆ ಮುಂದುವರೆಸಿದೆ.
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)