ಕಳಿಹಿತ್ಲು ಬೀಚ್ ಉತ್ಸವ ಮರ್ಗಿ ಸ್ಪರ್ಧೆ -2019, ಬೀಚ್ ಉತ್ಸವಕ್ಕೆ ಹರಿದು ಬಂದ ಜನಸಾಗರ

0
224

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

    

ಶಿರೂರು: ಜಿಲ್ಲಾಡಳಿತ ಉಡುಪಿ, ನಾಡದೋಣಿ ಮೀನುಗಾರರ ಸಂಘಅಳ್ವೆಗದ್ದೆ, ಅಲ್ಪಸಂಖ್ಯಾತರ ನಾಡದೋಣಿ ಮೀನುಗಾರರ ಸಂಘ ಕಳಿಹಿತ್ಲು,ಬೆಸುಗೆ ಫೌಂಡೇಶನ್ ಬೈಂದೂರು,ಜೆ.ಸಿ.ಐ ಶಿರೂರು ಇದರ ಆಶ್ರಯದಲ್ಲಿ ಸಾಂಪ್ರದಾಯಿಕ ದೋಣಿಗಳ ಸ್ಪರ್ಧೆ,ಬೀಚ್ ಉತ್ಸವ,ಮರ್ಗಿ ಸ್ಪರ್ಧೆ ಕಳಿಹಿತ್ಲು ಕಡಲ ಕಿನಾರೆಯಲ್ಲಿ ನಡೆಯಿತು.ಉದ್ಯಮಿ ಮಣೆಗಾರ್ ಜಿಪ್ರಿ ಸಾಹೇಬ್ ಹಾಗೂ ಗ್ರಾ.ಪಂ ಉಪಾಧ್ಯಕ್ಷ ನಾಗೇಶ್ ಅಳ್ವೆಗದ್ದೆ ಮರಳು ಶಿಲ್ಪ ಮತ್ತು ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಕಳಿಹಿತ್ಲು ಕಡಲ ಕಿನಾರೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ.ಇಂತಹ ಕಾರ್ಯಕ್ರಮಗಳಿಂದ ಊರಿನ ಅಭಿವೃದ್ದಿ ಸಾಧ್ಯ ಎಂದರು.

ಬೀಚ್ ಉತ್ಸವಕ್ಕೆ ಹರಿದು ಬಂದ ಜನಸಾಗರ: ಈ ಬಾರಿಯ ಕಳಿಹಿತ್ಲು ಬೀಚ್ ಉತ್ಸವಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಜನರು ಆಗಮಿಸಿದ್ದರು.14ಕ್ಕೂ ಅಧಿಕ ಹಗ್ಗ ಜಗ್ಗಾಟ ತಂಡ, ಮಹಿಳೆಯರ ಹಗ್ಗ ಜಗ್ಗಾಟ ತಂಡ, 17ಕ್ಕೂ ಅಧಿಕ ಮರ್ಗಿ ಸರ್ಧೆಗಳು, ಯುವಕರಿಗೆ ಈಜು ಸ್ಪರ್ಧೆಗಳು,ಬೋಟಿಂಗ್,ಬಿರಿಯಾನಿ ಕೌಂಟರ್ ಜನಾಕರ್ಷಣೆಗೊಂಡಿತ್ತು.ರಾತ್ರಿ 10 ಗಂಟೆಯವರೆಗೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು.ವಿಶೇಷ ಬೆಳಕಿನ ವಿನ್ಯಾಸ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿತ್ತು.

ಪತ್ರಕರ್ತ ಅರುಣ ಕುಮಾರ್ ಶಿರೂರು ಕಾರ್ಯಕ್ರಮ ನಿರ್ವಹಿಸಿದರು.ಶಿರೂರು ಡಾಟ್ ಕಾಮ್ ವರದಿಗಾರ ಗಿರಿ ಶಿರೂರು ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)