ಶುಭದಾ ಶಾಲೆಗಳ ವಾರ್ಷಿಕ ಸಮ್ಮೇಳನ

0
227

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕಿರಿಮಂಜೇಶ್ವರ : ಶುಭದಾ ಶಾಲೆಗಳು ಕಿರಿಮಂಜೇಶ್ವರ ಇದರ 25ನೇ ವಾರ್ಷಿಕ ಸಮ್ಮೇಳನ ಶಾಲಾ ಸಭಾಭವನದಲ್ಲಿ ನಡೆಯಿತು.

ಆರಂಭದಲ್ಲಿ ಶ್ರೀ ಧರ್ಮೇಶ್ ಎಸ್ ಸಾಲಿಯನ್, ಮುಂಬೈ ಇವರು ಧ್ವಜಾರೋಹಣಗೈದರು. ಕಾರ್ಯಕ್ರಮವನ್ನು ದೀಪಾ ಬೆಳಗಿಸಿ ಉದ್ಘಾಟಿಸಿದ ಉಪ್ಪುಂದ ಶ್ರೀ ಚಂದ್ರಶೇಖರ ಹೊಳ್ಳ ಇವರು ಮಾತನಾಡಿ 25 ವರ್ಷಗಳ ಹಿಂದೆ ಡಾ| ಎನ್ ಕೆ ಬಿಲ್ಲವ ಇವರು ಚಿಕ್ಕ ಕಟ್ಟಡದಲ್ಲಿ ಆರಂಭಿಸಿದ ಈ ವಿದ್ಯಾ ಸಂಸ್ಥೆ ಇಂದು ತನ್ನದೇ ಆದ ಸುಸಜ್ಜಿತ ಕಟ್ಟಡದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ನೀಡುವುದರ ಮೂಲಕ ತನ್ನದೇ ಆದ ಹೆಸರನ್ನು ಗಳಿಸಿಕೊಂಡಿದೆ. ನಿಜಕ್ಕೂ ಈ ಗ್ರಾಮೀಣ ಪ್ರದೇಶದ ನಾಗರಿಕರು ಧನ್ಯರು ಡಾ| ಎನ್.ಕೆ.ಬಿಲ್ಲವರು ನಿಜಕ್ಕೂ ಪ್ರಶಂಸನಾರ್ಹ ವ್ಯಕ್ತಿ ಎಂದರೆ ಅತಿಶಯೊಕ್ತಿ ಆಗಲಾರದು ಎಂದರು.

ಮುಖ್ಯ ಅತಿಥಿಗಳಾದ ಶ್ರೀ ಗೋಪಾಲಕೃಷ್ಣ ಕುಂದರ್, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಸಂಪರ್ಕ ಅಧಿಕಾರಿ ಇವರು ಮಾತನಾಡಿ ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು ಅತಿಯಾದ ಗ್ರಹಣ ಶಕ್ತಿ ಹೊಂದಿರುತ್ತದೆ, ಎಳೆಯಲ್ಲಿ ಮಗುವಿಗೆ ಕಲಿಸಿದ ಸಂಸ್ಕಾರಗಳು ಅವರ ಭವಿಷ್ಯವನ್ನು ರೂಪಿಸುತ್ತವೆ, ಮಗುವು ಅನುಕರಣೆ ಸ್ವಭಾವ ಹೊಂದಿರುವ ಕಾರನ ಪೋಷಕರು ಮತ್ತು ಶಿಕ್ಷಕರು ಮಗುವಿನೊಂದಿಗೆ ಮಾದರಿಯಾಗಿ ವ್ಯವಹರಿಸಬೇಕು ಎಂದರು. ಮುಖ್ಯ ಅತಿಥಿ ಶ್ರೀ ಧರ್ಮೇಶ್ ಎಸ್ ಸಾಲಿಯನ್ ಅವರು ಮಾತನಾಡಿ ಡಾ| ಎನ್ ಕೆ ಬಿಲ್ಲವರ 25 ವರ್ಷಗಳ ಶೈಕ್ಷಣಿಕ ಕೊಡುಗೆಯ ಏಳುಬೀಳುಗಳನ್ನು ನೆನಪಿಸಿಕೊಂಡು ಅವರಿಂದ ಇನ್ನೂ ಹೆಚ್ಚಿನ ಸಾಮಾಜಿಕ ಶೈಕ್ಷಣಿಕ ಸೇವೆಯು ಗ್ರಾಮೀಣ ಜನತೆಗೆ ಸಿಗಲಿ ಎಂದು ವಿನಂತಿಸಿಕೊಂಡು ಶಾಲೆಗೆ ಶುಭಕೋರಿದರು.

ಪರ್ತಕರ್ತ ಮತ್ತು ತಜ್ಞರಾದ ಶ್ರೀ ಎಸ್ ಜರ್ನಾದನ್ ಇವರು ಶಾಲೆಯ ಆರಂಭದ ಸುಮಾರು 3 ವರ್ಷ ಡಾ| ಎನ್ ಕೆ ಬಿಲ್ಲವರ ಒಡನಾಡಿಯಾಗಿ ಹಾಗೂ ಶೈಕ್ಷಣಿಕ ಮಾರ್ಗದರ್ಶಕರಾಗಿ ಇದ್ದುದನ್ನು ಸ್ಮರಿಸಿಕೊಂಡು ಶಾಲೆಗೆ ಶುಭಕೋರಿದರು. ಡಾ| ಎನ್ ಕೆ ಬಿಲ್ಲವರ ನಿಕಟ ವರ್ತಿಗಳಾದ ಪಂಡಿತ್ ನವೀನಚಂದ್ರ ಸುನೀಲ್ ಅಂತರಾಷ್ಟ್ರೀಯ ವಾಸ್ತು ತಜ್ಞರು ಮುಂಬೈ ಮತ್ತು ಶ್ರೀ ಚಂದ್ರಶೇಖರ ಶೆಟ್ಟಿ ಉದ್ಯಮಿ ಮುಂಬೈ ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಶುಭದಾ ಬಿಲ್ಲವ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಅತಿಥಿಗಳ ಮಾತುಗಳನ್ನು ಉಲ್ಲೇಖಿಸಿ ಸರ್ವರಿಗೂ ಶುಭಕೋರಿದರು. ಕಳೆದ 25 ವರ್ಷಗಳಿಂದ ಶಾಲಾ ಅಭಿವೃದ್ಧಿಯಲ್ಲಿ ದುಡಿದ ಎಲ್ಲಾ ಪದಾಧಿಕಾರಿಗಳನ್ನು ಸ್ಮರಿಸಿಕೊಂಡು ಇನ್ನೂ ಮುಂದೆಯೂ ಶಾಲೆಯ ಪ್ರಗತಿಗೆ ಸಹಕಾವನ್ನು ಕೋರಿದರು.

ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಡಾ| ಎನ್ ಕೆ ಬಿಲ್ಲವ ಮುಖ್ಯ ಶಿಕ್ಷಕ ರವಿದಾಸ್ ಶೆಟ್ಟಿ, ನಿರ್ದೇಶಕ ಕೆ ಪುಂಡಲೀಕ ನಾಯಕ್, ಸಂಚಾಲಕ ಶಂಕರ್ ಪೂಜಾರಿ, ಸಂಯೋಜಿಕ ಗೀತಾದೇವಿ ಅಡಿಗ, ಯು.ಎಚ್. ರಾಜಾರಾಮ್ ಭಟ್, ಟ್ರಸ್ಟಿಗಳಾದ ಮಂಜು ಪೂಜಾರಿ, ತೇಜಪ್ಪ ಶೆಟ್ಟಿ ಸದಸ್ಯರಾದ ಶೇಖರ ಎಮ್ ಪೂಜಾರಿ, ರಾಜೀವ ಶೆಟ್ಟಿ, ಉದಯ ಪೂಜಾರಿ, ಸತೀಶ್ ಪೂಜಾರಿ, ಬಿ.ಎ ಹಂಝಾ, ತೇಜ ಪೂಜಾರಿ, ವೈಶಾಖ್ ನಾಯರ್ ಮತ್ತು ಡಾ| ಎನ್ ಕೆ ಬಿಲ್ಲವ ಅವರ ಪುತ್ರಿ ಶ್ರುತಿ ಬಿಲ್ಲವ ಹಾಗೂ ತಾಯಿ, ತಂಗಿ ಸಭೆಯಲ್ಲಿ ಉಪಸ್ಥಿತರಿದ್ದರು.

ಕುಮಾರಿ ಮೇಘನಾ ಜಿ ಸ್ವಾಗತಿಸಿ ಕುಮಾರಿ ಸ್ವೀಕೃತಿ ವಂದಿಸಿದರು. ಕುಮಾರಿ ಪ್ರಣಮ್ಯ ಕಾರ್ಯಕ್ರಮ ನಿರೂಪಣೆ ಮಾಡಿದರು, ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವೈವಿದ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)