2 ಸಾವಿರ ಮುಖಬೆಲೆ ನೋಟುಗಳು ಸಾಕಷ್ಟು ಚಾಲ್ತಿಯಲ್ಲಿದೆ, ಆದ್ದರಿಂದಲೇ ಮುದ್ರಣ ಮಾಡುತ್ತಿಲ್ಲ

0
197

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ: ಸದ್ಯ ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ 2000 ಮುಖ ಬೆಲೆಯ ನೋಟುಗಳು ಸಾಕಷ್ಟು ಚಾಲ್ತಿಯಲ್ಲಿರುವ ಉದ್ದೇಶದಿಂದ ಮತ್ತೊಮ್ಮೆ ಹೆಚ್ಚುವರಿ ನೋಟುಗಳನ್ನು ಮುದ್ರಣ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸರ್ಕಾರ ಇಂದು ತಿಳಿಸಿದೆ.

ಅಗತ್ಯಕ್ಕೆ ತಕ್ಕಂತೆ ನೋಟುಗಳನ್ನು ಮುದ್ರಿಸಲಾಗುತ್ತದೆ. ಸದ್ಯ ಆರ್ಥಿಕ ವ್ಯವಸ್ಥೆಯಲ್ಲಿ 2000 ಮುಖ ಬೆಲೆ ನೋಟುಗಳು 35% ರಷ್ಟು ಇದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್​ ಚಂದ್ರ ಗರಗ್​ ಅವರು ತಿಳಿಸಿದ್ದಾರೆ.

2 ಸಾವಿರ ಮುಖ ಬೆಲೆಯ ನೋಟುಗಳು ಇನ್ನು ಮುಂದೆ ಮುದ್ರಣಗೊಳ್ಳುವುದಿಲ್ಲ ಎಂಬ ಸಂಗತಿ ಕಳೆದ ಎರಡು ದಿನಗಳಿಂದಲೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಈ ಬಗ್ಗೆ ದೇಶದಲ್ಲಿ ಆತಂಕ ಮನೆ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಟ್ವೀಟ್​ ಮಾಡಿ ಅನುಮಾನ ನಿವಾರಣೆ ಮಾಡಿರುವ ಗರಗ್​ ಅವರು, ” 2000 ನೋಟುಗಳು ವ್ಯವಸ್ಥೆಯಲ್ಲಿ ಸಾಕಷ್ಟು ಚಾಲ್ತಿ ಇವೆ. ಹೀಗಾಗಿಯೇ ಮತ್ತಷ್ಟು ಉತ್ಪಾದನೆ ಮಾಡುವ ಪ್ರಮೇಯ ಇಲ್ಲ,” ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಹಿಂದೆ ಗುರುವಾರ ಸಂಜೆ ಇದೇ ವಿಚಾರವಾಗಿ ಮಾತನಾಡಿದ್ದ ಆರ್​ಬಿಐನ ಅಧಿಕಾರಿಯೊಬ್ಬರು ನೋಟು ಮುದ್ರಣದ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಹೇಳಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)