ನೆನಪು: ಕೂರಾಡಿ ಸೀತಾರಾಮ ಶೆಟ್ಟರು

0
1376

ಕೂರಾಡಿ ಇನ್ನಿಲ್ಲ. ಕಳೆದ ಹತ್ತು ಹದಿನೈದು ವರ್ಷಗಳಿಂದ ಅವರನ್ನು ಸತಾಯಿಸಿದ್ದ ಕ್ರೂರ ವಿಧಿ ಇವತ್ತು ಅವರನ್ನೇ ತನ್ನೆಡೆಗೆ ಸಾವಿನ ಮೂಲಕ ಕರೆಸಿಕೊಂಡಿದೆ,

ಕೂರಾಡಿ ಸೀತಾರಾಮ್ ಶೆಟ್ಟರು ತನ್ನ ಕ್ರಿಯಾಶೀಲತೆಯಿಂದ ಬಾರ್ಕೂರಿನ ಸಮೀಪದ ಕೂರಾಡಿ ಎಂಬ ಚಿಕ್ಕ ಊರನ್ನು ತನ್ನ ಹೆಸರಿನ ಮೂಲಕ ಕರ್ನಾಟಕಕ್ಕೇ ಪರಿಚಯಿಸಿದವರು.

ಬಂಟ ಜನಾಂಗದಲ್ಲಿ ಹುಟ್ಟಿ ಸಹಜವಾಗಿಯೇ ನಾಯಕತ್ವ ಗುಣ ಹೊಂದಿದ್ದ ಕೂರಾಡಿ ಸೀತಾರಾಮ ಶೆಟ್ಟರು ನಾಟಕ ರಂಗದಲ್ಲಿ ಮಾಡಿದ ಸಾಧನೆ ಇಂದಿಗೂ ಎಂದಿಗೂ ನೆನೆಪಿನಲ್ಲಿಡುವಂತಹದ್ದು. ಅದರಲ್ಲೂ ಬೈಂದೂರಿನ ಸಾಂಸ್ಕೃತಿಕ ರಂಗಕ್ಕೆ ಶೆಟ್ಟರು ಕೊಟ್ಟ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಪರದೆ ನಾಟಕಗಳಲ್ಲೆ ಆತ್ಮ ರತಿ ಮೆರೆಯುತ್ತಿದ್ದ ಬೈಂದೂರನ್ನು ಹೊಸ ಬಗೆಯ ನಾಟಕಗಳಿಗೆ ಒಗ್ಗಿಸಿದ ಕೀರ್ತಿ ಶೆಟ್ಟರು ಮತ್ತು ಕೆ. ಪ್ರಭಾಕರನ್ ರವರಿಗೆ ಸಲ್ಲಬೇಕು.

ಉದ್ಭವ, ನಾಯೀ ಕತೆ , ಅಲಿ ಬಾಬಾ , ದ್ರಷ್ಟಿ ..ಹೀಗೆ ಶೆಟ್ಟರು ನಿರ್ದೇಶಿಸಿದ ಅದ್ಭುತ ನಾಟಕಗಳ ಪಟ್ಟಿ ಉದ್ದಕ್ಕೆ ಬೆಳೆಯುತ್ತದೆ. ಉದ್ಭವದಲ್ಲಿ ಶೆಟ್ಟರು ಸ್ರಷ್ಟಿಸಿದ ಗಾಂಧೀ ಪಾತ್ರ ದ ದ್ರಶ್ಯಾವಳಿ , ದ್ರಷ್ಟಿ ನಾಟಕದ ಪ್ರತಿಯೊಂದು ದ್ರಶ್ಯ, ಬೆಳಕು , ಸೆಟ್ಟಿಂಗ್ ಶೆಟ್ಟರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ಅಷ್ಟೇ ಅಲ್ಲ ಯಾವುದೇ ಕಲಾವಿದನಿಗೆ ನೋವಾಗದಂತೆ ಎಲ್ಲರನ್ನೂ ಜೊತೆಗೂಡಿಸಿಕೊಂಡು ಹೋಗುತ್ತಿದ್ದ ಅವರ ಸ್ನೇಹಮಯ ವ್ಯಕ್ತಿತ್ವವನ್ನು ಶಬ್ದಗಳಲ್ಲಿ ಹಿಡಿದಿಡಲು ಕಷ್ಟ

ನಾಟಕ ರಂಗಕ್ಕೆ ಸೇವೆ ಸಲ್ಲಿಸಲೇ ಹುಟ್ಟಿದಂತಿದ್ದ ಶೆಟ್ಟರು ಅದೆಷ್ಟೋ ರಾತ್ರಿ ಬೈಂದೂರಿಗೆ ಬಂದು ರಾತ್ರಿ ನಾಟಕ ನಿರ್ದೇಶಿಸಿ ಬಸ್ಸು ಸಿಗದೆ ಲಾರಿಯಲ್ಲಿ ವಾಪಸು ಹೋದ ಉದಾಹರಣೆಗಳೆಷ್ಟೋ . ಬಾರ್ಕೂರಿನಲ್ಲಿ ಹುಟ್ಟಿದ ಅವರು ಬೈಂದೂರಿಗೆ ಒಂದರ್ಥದಲ್ಲಿ ಮಗನೇ ಆಗಿದ್ದರು.
ಎಡೆ ಬಿಡದೆ ವೃತ್ತಿಯ ನಡುವೆ ನಾಟಕದ ಗೀಳಿನ ಜೊತೆಗೆ ತನ್ನ ಆರೋಗ್ಯವನ್ನೇ ನಿರ್ಲಕ್ಷಿಸಿದ್ದು ಅವರಿಗೆ ಮುಳುವಾಯಿತು. ಹಾಸಿಗೆ ಹಿಡಿದ ಮೇಲೂ ತಾನು ಪುನಃ ಚೇತರಿಸಿ ಕೊಳ್ಳುತ್ತೇನೆ, ಪುನಃ ಬೈಂದೂರಿಗೆ ಬಂದು ನಾಟಕ ನಿರ್ದೇಶಿಸುತ್ತೇನೆ ಎಂಬ ಕನಸು ನಿಜವಾಗಿಯೂ ನನಸಾಗಲಿ. ಶೆಟ್ಟರು ಮತ್ತೊಮ್ಮೆ ಹುಟ್ಟಿ ಬರಲಿ.

~ ಮೋಹನ್ ಬಂಕೇಶ್ವರ

B.G.Mohandas (ಬೀಜಿ)

B.G.Mohandas; M.Pharm FAGE DBM Founder ; GulfKannadiga.com & Kannadigaworld.com; kollur.com, devadiga.com & byndoor.com | Formerly Head of Pharmacy at Gulf Medical University, Dubai & Professor KMC Manipal