ಸೈನಿಕರ ಕಲ್ಯಾಣ ನಿಧಿ ಜಾಗೃತಿಗೆ ಸೈಕಲ್ ಯಾತ್ರೆ : ಬೈಂದೂರು ಪೊಲೀಸ್ ಠಾಣಾ ವತಿಯಿಂದ ಸ್ವಾಗತ

0
410

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಬೈಂದೂರು : ಕಾರ್ಕಳ ನಕ್ಸಲ್ ನಿಗ್ರಹ ಪಡೆಯಲ್ಲಿ ಪೇದೆಯಾಗಿರುವ ಭೀಮಶಂಕರ್ ಸೈನಿಕರ ಕಲ್ಯಾಣ ನಿಧಿಯ ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ‘ಭಾರತದರ್ಶನ’ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.

ಮೂಲತಃ ವಿಜಾಪುರದ ಇವರು ಸೆಪ್ಪಂಬರ್ ನಿಂದ ದೆಹಲಿಯಲ್ಲಿ ಸೈಕಲ್ ಯಾತ್ರೆ ಆರಂಭಿಸಿದ್ದರು. ಈವರೆಗೂ 11000 ಕಿಮೀ ಕ್ರಮಿಸಿದ್ದಾರೆ. ಗುರುವಾರ ಬೈಂದೂರಿಗೆ ಆಗಮಿಸಿದ್ದು ಅವರನ್ನು ಬೈಂದೂರು ಪೊಲೀಸ್ ಠಾಣೆಯ ಪಿ.ಎಸ್.ಐ ತಿಮ್ಮೇಶ್ ಹಾಗೂ ಸಿಬ್ಬಂದಿ ವರ್ಗದವರು ಸ್ವಾಗತಿಸಿದರು.

ರಾಜ್ಯದ  ಎಲ್ಲಾ ರಾಜಧಾನಿಗಳಿಗೆ ಭೇಟಿ ನೀಡುವ ಗುರಿ ಹೊಂದಿರುವ  ಭವಾನಿ ಶಂಕರ 30 ದಿನಗಳಲ್ಲಿ 3 ಸಾವಿರ ಕಿ.ಮೀ ಕ್ರಮಿಸಿ ಪುನಃ ದೆಹಲಿಯಲ್ಲಿ ಯಾತ್ರೆ ಕೊನೆಗೊಳಿಸಿದ್ದಾರೆ. ಪೊಲೀಸ್ ವೃತ್ತಿಯಲ್ಲಿ ಇರುವವರಿಗೆ ರಜೆ ಸಿಗುವುದು ಅಪರೂಪ. ಆದರೆ ಬೀಮಶಂಕರ್ ಅವರ ಮಹತ್ಕಾರ್ಯಕ್ಕೆ 120 ದಿನಗಳ ರಜೆಯನ್ನೂ ನೀಡಲಾಗಿದೆ. ಇವರು ಹೋದಲ್ಲೆಲ್ಲ ಸೈನಿಕರಿಗೆ ಗೌರವ ನೀಡಿವಂತೆ ಮನವಿ ಮಾಡುತ್ತಾರೆ. ರಾತ್ರಿ ವೇಳೆ ಪೆಟ್ರೋಲ್ ಪಂಪ್ ದೇವಸ್ಥಾನ ಅಥವಾ ಪೊಲೀಸ್ ಕ್ವಾರ್ಟ್ರಸ್ ಗಳಲ್ಲಿ ತಂಗುತ್ತಾರೆ.

ಈ ಸಂದರ್ಭದಲ್ಲಿ ಪಿ.ಎಸ್. ಐ ತಿಮ್ಮೇಶ್, ಸಮಾಜಸೇವಕ ಸುಬ್ರಮಣ್ಯ ಬಿಜೂರು, ಬೈಂದೂರು ಪೊಲೀಸ್ ಠಾಣಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)