ಬೈಂದೂರು ಸುರಭಿಯಿಂದ ಯಕ್ಷಗಾನ ತರಬೇತಿ ಉದ್ಘಾಟನೆ

0
109

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು ಇಲ್ಲಿನ ಸಾಂಸ್ಕøತಿಕ ವೇದಿಕೆ ಸುರಭಿ (ರಿ) ಬೈಂದೂರು ಇದರ “ಯಕ್ಷಸುರಭಿ” ಆಶ್ರಯದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಸಹಯೋಗದಲ್ಲಿ 3 ತಿಂಗಳ ತರಬೇತಿ ಶಿಬಿರವನ್ನು ಅಕಾಡೆಮಿಯ ಸದಸ್ಯ ಹಾಗೂ ಯಕ್ಷಗಾ ಕಲಾವಿದರಾದ ಶ್ರೀಯುತ ರಾಜಶೇಖರ ಹೆಬ್ಬಾರರು ದುಡಿಯನ್ನು ನುಡಿಸುವುದರ ಮೂಲಕ ಉದ್ಘಾಟಿಸಿ ಅಕಾಡೆಮಿ ನೀಡುತ್ತಿರುವ ಈ ಒಂದು ಸೌಲಭ್ಯವನ್ನುಗ್ರಾಮೀಣ ಭಾಗದ ಕಲಾವಿದರೂ ಯಕ್ಷಸುರಭಿಯ ಮೂಲಕ ಪಡೆದುಕೊಳ್ಳುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಲಾವಿದ ನೀನಾಸಂ ಪದವೀಧರ ಉಡುಪಿಯ ಪ್ರಥ್ವಿನ್.ಕೆ. ವಾಸು ಉಪಸ್ಥಿತರಿದ್ದು ಅಕಾಡೆಮಿಯ ಸಹಕಾರದಿಂದ ನಡೆಯುವ ಈ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಸುರಭಿಯ ಅಧ್ಯಕ್ಷ ಶ್ರೀ ಶಿವರಾಮ ಕೊಠಾರಿ ವಹಿಸಿದ್ದು ಯಕ್ಷಗಾನ ನಿರ್ದೆಶಕ ಶ್ರೀ ಪ್ರಶಾಂತ್ ಮಯ್ಯ ದಾರಿಮಕ್ಕಿ ಉಪಸ್ಥಿತರಿದ್ದು ಸುರಭಿಯ ನಿರ್ದೇಶಕ ಶ್ರೀ ಸುಧಾಕರ್ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)