ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಸಹಕಾರ ಇಲಾಖೆಯ ‘ಲಂಚಾ’ಧಿಕಾರಿಗಳು

0
129

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೆಂಗಳೂರು, ಡಿ.4-ಸಹಕಾರ ಸಂಘದ ಷೇರು ಸಂಗ್ರಹದ ಅನುಮತಿ ಪತ್ರ ನೀಡಲು 10 ಲಕ್ಷ ಲಂಚ ಕೇಳಿ 50 ಸಾವಿರ ನಗದು ಪಡೆಯುವಾಗ ಸಹಕಾರ ಇಲಾಖೆಯ ಅಧಿಕಾರಿಗಳಿಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ನಗರದ ಆಲಿ ಹಾಸ್ಕರ್ ರಸ್ತೆಯ ಸಹಕಾರ ಇಲಾಖೆಯ ಸಹಕಾರ ಸಂಘಗಳ ನೋಂದಣಿ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ವಸತಿ ಮತ್ತು ಇತರ ಸಂಘಗಳ ನೋಂದಣಿ ಕಚೇರಿಯ ಹೆಚ್ಚುವರಿ ನೋಂದಣಿ ಅಧಿಕಾರಿ ಆರ್.ಶ್ರೀಧರ್ ಹಾಗೂ ಪ್ರಥಮ ದರ್ಜೆ ಸಹಾಯಕರಾದ ಪುಷ್ಪಲತಾ ಅವರನ್ನು ಬಂಧಿಸಿದ್ದಾರೆ.

ನೋಂದಾಯಿತ ಸಹಕಾರ ಸಂಘ ಷೇರು ಸಂಗ್ರಹಕ್ಕೆ ಅನುಮತಿ ನೀಡಲು ಅರ್ಜಿ ಸಲ್ಲಿಸಿತ್ತು. ಈ ಅನುಮತಿ ಪತ್ರ ನೀಡಲು ಅರ್ಜಿದಾರರಿಂದ ಅಧಿಕಾರಿಗಳು 10 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದರು. ಹಾಗೂಹೀಗೂ ಮಾಡಿ ಚೌಕಾಸಿ ನಡೆದು ಕೊನೆಗೆ 5 ಲಕ್ಷಕ್ಕೆ ವ್ಯವಹಾರ ಕುದುರಿತ್ತು ಎನ್ನಲಾಗಿದೆ. ಇಂದು ಮುಂಗಡವಾಗಿ 50 ಸಾವಿರ ರೂ. ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬೆಂಗಳೂರು ನಗರ ಲೋಕಾಯುಕ್ತ ಪೆÇಲೀಸರು ಕಾರ್ಯಾಚರಣೆ ನಡೆಸಿದ್ದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)