ಕುಂದಾಪುರ ದೇವಾಡಿಗ ಮಿತ್ರ (ರಿ.)ಕದಂ ದುಬೈ (ಯು.ಎ. ಇ) ಇದರ 8ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

0
232

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಕುಂದಾಪುರ ದೇವಾಡಿಗ ಮಿತ್ರ (ರಿ.)ಕದಂ ದುಬೈ (ಯು.ಎ. ಇ) ಇದರ 8ನೇ ವರ್ಷದ ವಾರ್ಷಿಕೋತ್ಸವವು ಸಂಘದ ಅಧ್ಯಕ್ಷರಾದ ದಿನೇಶ್ ಚಂದ್ರ ಶೇಖರ ದೇವಾಡಿಗರ ಅಧ್ಯಕ್ಷತೆಯಲ್ಲಿ (ಯು. ಎ.ಇ )ನ ಅಜಮಾನ್ ಬೀಚ್ ಹೋಟೆಲ್ ನಲ್ಲಿ ಜರುಗಿತು.

ಕಾರ್ಯಕ್ರಮವನ್ನು ಕದಂ ಮಹಿಳಾ ಸದಸ್ಯರು ಹಾಗೂ ಅತಿಥಿ ಗಣ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಕಾರ್ಯಕ್ರದಲ್ಲಿ ಕದಂ ಸಂಸ್ಥೆಯಿಂದ ಪ್ರತಿವರ್ಷ ಕೊಡಮಾಡುವ ಕದಂ ದೇವಾಡಿಗ ಸಾಧಕ ಪ್ರಶಸ್ತಿಯನ್ನು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್(ರಿ.)ಬಾರ್ಕೂರು ಇದರ ಅಧ್ಯಕ್ಷರು ಧಾರ್ಮಿಕ ಮುಖಂಡರು ಹಾಗೂ ಧಾನಿಗಳಾದ ಅಣ್ಣಯ್ಯ ಶೇರಿಗಾರ್ ಬಾರ್ಕೂರು ಇವರಿಗೆ ನೀಡಲಾಯಿತು.ಕಾರ್ಯಕ್ರಮದಲ್ಲಿ ಕುಂದಾಪುರ ದೇವಾಡಿಗ ಮಿತ್ರ ಕದಂನ ಅಂತರಾಜಾಲತಾಣವನ್ನು(website) ದಿನೇಶ್ ಚಂದ್ರಶೇಖರ್ ದೇವಾಡಿಗರು ಅನಾವರಣಗೊಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದುಬೈ ದೇವಾಡಿಗ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್ ನಮ್ಮ ಕುಂದಾಪುರ ಕನ್ನಡ ಬಳಗದ ಅಧ್ಯಕ್ಷರಾದ ಸಾಧನಾ ದಾಸ್, ಸಂದ್ಯಾ ಕ್ರಿಯೇಷನ್ ಶೋಧನ್ ಪ್ರಸಾದ್, ಉದ್ಯಮಿ ಶೇಖರ ಶೆಟ್ಟಿ ,ಡಾ/ ಯಾದವ ದೇವಾಡಿಗ ಶ್ರೀಮತಿ ಶಾರದಾ ಅಣ್ಣಯ್ಯ ಶೇರಿಗಾರ್, ಕದಂನ ಉಪಾಧ್ಯಕ್ಷರುಗಳಾದ ಸುರೇಶ್ ದೇವಾಡಿಗ ಬಿಜೂರು, ನಿತ್ಯಾನಂದ ದೇವಾಡಿಗ ಬೆಸ್ಕೂರು, ನಾರಾಯಣ ದೇವಾಡಿಗ ದುಬೈ ಮೊದಲಾದವರು ಉಪಸ್ಥಿತರಿದ್ದರು. ಸಂಘದ ವಾರ್ಷಿಕ ವರದಿಯನ್ನು ಕದಂನ ಮಹಿಳಾ ಸದಸ್ಯೆಯಾದ ಪ್ರತಿಮಾ ನಾರಾಯಣ ದೇವಾಡಿಗ ಮಂಡಿಸಿದರು.

ಸಭೆಗೆ ಆಗಮಿಸಿದ ಅತಿಥಿಗಳನ್ನು ನಾರಾಯಣ ಬಡಾಕೆರೆ ಸ್ವಾಗತಿಸಿದರು ಸಭೆಯಲ್ಲಿ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಕುಂದಾಪುರ ಕನ್ನಡ ಶೈಲಿಯಲ್ಲಿ ವಾಸುದೇವ ದೇವಾಡಿಗ ಬೈಂದೂರು, ಮಂಜುನಾಥ್ ದೇವಾಡಿಗ ಮರವಂತೆ ರವಿ ಎನ್ ಎಮ್ ನೆರವೇರಿಸಿದರೆ ಕದಂನ ಮಹಿಳಾ ಸದಸ್ಯರು ಕದಂನ ಪುಟಾಣಿ ಮಕ್ಕಳು ವಿವಿಧ ನ್ರತ್ಯ ಪ್ರದರ್ಶನಗಳನ್ನು ಗೈದರೆ,ಯುವರಾಜ್ ದೇವಾಡಿಗ ಪ್ರಮೋದ ಮತ್ತು ತಂಡದವರು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ನೆರವೇರಿಸಿದರು. ಸಭಾ ಕಾರ್ಯಕ್ರಮವನ್ನು ನಾಗರಾಜ ದೇವಾಡಿಗ ನಾಯ್ಕನಕಟ್ಟೆ ನಿರೂಪಿಸಿದರು. ಅದೃಷ್ಟ ಚೀಟಿಯ ಫಲಿತಾಂಶವನ್ನು ನಿತ್ಯಾನಂದ ಬೆಸ್ಕೂರು ನೆರವೇರಿಸಿ ಸಂತೋಷ್ ಕೋಲ್ನಾಡು ವಂದಿಸಿದರು.ಜಗದೀಶ್ ದೇವಾಡಿಗ ಇವರು ವೀಕ್ಷಕರಿಗೆ ಕಾರ್ಯಕ್ರಮದ ನೇರ ಪ್ರಸಾರವನ್ನು ನೀಡಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (4) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)