ಕೊಲ್ಲೂರು: ಮಾಜಿ ಪ್ರದಾನಿ ದಿವಂಗತ ಇಂದಿರಾ ಗಾಂಧಿಯವರ 101ನೇ ಜನಮದಿನಾಚರಣೆ

0
154

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊಲ್ಲೂರು:  ಮಾಜಿ ಪ್ರದಾನಿ ದಿವಂಗತ ಇಂದಿರಾ ಗಾಂಧಿಯವರ 101ನೇ” ಜನಮ ದಿನಾಚರಣೆಯನ್ನು ಕೊಲ್ಲೂರು ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಎ.ಎನ್.ಆರ್ ವಸತಿ ಗೃಹದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ “ಇಂದಿರಾಗಾಂಧಿಯವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಯಿತು ಮತ್ತು ಇಂದಿರಾ ಗಾಂಧಿಯವರ ವಿಚಾರಧಾರೆಯ ಬಗ್ಗೆ ಮೆಲುಕು ಹಾಕಲಾಯಿತು.

ಊರ ಸಮಸ್ತ ಮಹನಿಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಊರಿನ ಹಿರಿಯ ನಾಗರಿಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು”.

ಈ ಸಂದರ್ಭದಲ್ಲಿ ಎ.ಎನ್. ಆರ್ ವಸತಿ ಗೃಹ ಮಾಲೀಕ ಕೆ ರಮೇಶ್ ಗಾಣಿಗ , ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಜಯಪ್ರಕಾಶ್ ಶೆಟ್ಟಿ, ವಿಶ್ವನಾಥ್ ಅಡಿಗ, ಪ್ರಕಾಶ್ ಪೂಜಾರಿ, ನೇತ್ರಾವತಿ, ಪ್ರೇಮ, ಗಿರಿಜಾ , ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ , ಕೊಲ್ಲೂರು ಮೂಕಾಂಬಿಕಾ ವ್ಯವಸಾಯ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಮತ್ತು ವಾಸು, ನಾರಾಯಣ ಶೆಟ್ಟಿ, ಜಯರಾಮ ಶೆಟ್ಟಿ, ವಿನಾಯಕ ಆಚಾರಿ, ಸುಬ್ರಾಯ ಆಚಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಚಂದ್ರ ಬಳೆಗಾರ ನಿರ್ವಹಿಸಿದರು ರಂಗ ನಾಯ್ಕ ವಂದಿಸಿದರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)