ಅಮಿತ್​ ಶಾಗೆ ಬೀಫ್​ ಬಿರಿಯಾನಿ ಪಾರ್ಸಲ್​ ಕಳಿಸ್ತಾರಂತೆ ಓವೈಸಿ

0
196

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)
ಮತದಾರರಿಗೆ ಬಿರಿಯಾನಿ ನೀಡಿದ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಅವರನ್ನು ಟೀಕಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಟೀಕೆಗೆ ಗುರಿಯಾಗಿದ್ದಾರೆ.

ಶಾ ಅವರನ್ನು ಗುರಿಯಾಗಿಸಿಕೊಂಡು ವ್ಯಂಗ್ಯವಾಡಿರುವ ಮಜ್ಲಿಸ್​ ಎ ಇತ್ತೆಹಾದುಲ್​ ಮುಸ್ಲಿಮೀನ್​ (ಎಂಐಎಂ) ಪಕ್ಷದ ಅಧ್ಯಕ್ಷ ಅಸಾದುದ್ದಿನ್​ ಓವೈಸಿ, ಬೇಕಿದ್ದರೆ ಶಾ ಅವರಿಗೆ ಬೀಫ್​ ಬಿರಿಯಾನಿ ಕಳುಹಿಸಲು ಕೆಸಿಆರ್​ ಅವರಿಗೆ ಶಿಫಾರಸು ಮಾಡುತ್ತೇನೆ ಎಂದಿದ್ದಾರೆ.

ಬೇರೆಯವರು ಬಿರಿಯಾನಿ ತಿಂದರೆ ಅಮಿತ್​ ಶಾ ಅವರಿಗೆ ಏಕೆ ಹೊಟ್ಟೆ ಕಿಚ್ಚು? ಶಾ ಅವರಿಗೂ ಬಿರಿಯಾನಿ ಇಷ್ಟ ಎಂದು ನನಗೆ ಗೊತ್ತಿರಲಿಲ್ಲ. ಹೋಗಲಿ ಬಿಡಿ ನಿಮಗೂ ಒಂದು ಬಿರಿಯಾನಿ ಕಳುಹಿಸಲು ಕೆಸಿಆರ್ ಅವರಿಗೆ ಶಿಫಾರಸು ಮಾಡುತ್ತೇನೆ ಎಂದು ಓವೈಸಿ ಹೇಳಿದ್ದಾರೆ.
ಎಲ್ಲೋ ಹೋಗಿದ್ದವರು ಇದ್ದಕ್ಕಿಂದ್ದಂತೆ ಪಾಕಿಸ್ತಾನಕ್ಕೆ ಭೇಟಿ ನೀಡಿ ನವಾಜ್​ ಷರೀಫ್ ಅವರ ಮಗಳ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೋಗಿದ್ದರಲ್ಲ, ಅಲ್ಲಿ ಅವರಿಗೆ ತಿನ್ನಲು ಏನು ಕೊಟ್ಟರು? ನೀವು ಅಲ್ಲಿ ತಿಂದದ್ದು ಏನು ಎಂಬುದು ನಿಮಗೆ ಗೊತ್ತಿದೆಯಾ? ಎಂದು ಓವೈಸಿ ಟೀಕಿಸಿದ್ದಾರೆ.
ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)