ವಿಜಯಮಕ್ಕಳಕೂಟ ಆಂಗ್ಲಮಾದ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ಕಾರ್ಯಗಾರ

0
168

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ವಿಜಯಮಕ್ಕಳಕೂಟ ಆಂಗ್ಲಮಾದ್ಯಮ ಹಿ.ಪ್ರಾ.ಶಾಲೆ ಅತ್ರಾಡಿಯಲ್ಲಿ ಜೆ.ಸಿ.ಐ ಚಿತ್ತೂರು ಇವರ ಸಹಯೋಗದೊಂದಿಗೆ ಶಿಕ್ಷಕರಿಗೆ ಒಂದು ದಿನದ ಪುನಃಶ್ವೇತನ ತರಬೇತಿ ಕಾರ್ಯಗಾರ ನಡೆಸಲಾಯಿತು.

ವಿಜಯಮಕ್ಕಳಕೂಟ ಶಾಲೆಯ ವಿದ್ಯಾರ್ಥಿ ನಾಯಕಿ ಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದಳು.

ಈ ತರಬೇತಿ ಕಾರ್ಯಗಾರವನ್ನು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಉದ್ಘಾಟಿಸಿ ಶಿಕ್ಷಕರಿಗೆ ಈ ರೀತಿಯ ಪುನಃಶ್ಚೇತನ ಕಾರ್ಯಕ್ರಮ ಅನಿವಾರ್ಯ ಎಂದು ಹೇಳಿದರು.

ರಾಷ್ಟ್ರಮಟ್ಟದ ಖ್ಯಾತ ತರಬೇತುದಾರರಾದ ಜೆಸಿ ರಾಜೇಂದ್ರ ಭಟ್ ಕಾರ್ಕಳ ಇವರು ನಡೆಸಿಕೊಟ್ಟರು.

ಈ ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ವಿಜಯ ಮಕ್ಕಳಕೂಟ ಶಾಲೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೆ.ಸಿ.ಐ ಚಿತ್ತೂರು ಇದರ ಅಧ್ಯಕ್ಷ ಜೆ.ಸಿ ನಾಗೇಂದ್ರ ಆರ್ಚಾಯ ಹಾಗೂ ಜೆಸಿಐ ಚಿತ್ತೂರು ಇದರ ಸದಸ್ಯರಾದ ಗೋರ್ವಧನ ಜೋಗಿ ಉಪಸ್ಥಿತರಿದ್ದರು.

ವರಸಿದ್ಧಿವಿನಾಯಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ಸ.ಹಿ.ಪ್ರಾ.ಶಾಲೆ ವಂಡ್ಸೆ ಹಾಗೂ ಸ.ಹಿ.ಪ್ರಾ ಶಾಲೆ ಚಿತ್ತೂರು ಇದರ ಶಿಕ್ಷಕರು ಪಾಲ್ಗೊಂಡರು.

ವಿಜಯಮಕ್ಕಳಕೂಟದ  ಪೋಷಕ ಸಂಘದ ಅಧ್ಯಕ್ಷ ಡಾ| ರಾಜೇಶ್ ಬಾಯರಿ ಸ್ವಾಗತಿಸಿ ಪ್ರಸ್ತಾವಿಕ ಮತುಗಳನ್ನಾಡಿದರು, ವಿಜಯಮಕ್ಕಳಕೂಟದ ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್ ಕಾರ್ಯಕ್ರವನ್ನು ನಿರೂಪಿಸಿದರು.

 ವರದಿ : ರಕ್ಷಿತ್ ಶೆಟ್ಟಿ ವಂಡ್ಸೆ

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)