ಅನೈತಿಕ ಸಂಬಂಧಕ್ಕೆ ಬಲಿಯಾದ್ಳು ಎರಡು ಮಕ್ಕಳ ತಾಯಿ

0
205

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

murder

ಹೈದರಾಬಾದ್: ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿ ಪ್ರೇಯಸಿಯನ್ನೇ ಪ್ರಿಯಕರ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಚಂದ್ರಗಿರಿಯಲ್ಲಿ ನಡೆದಿದೆ.

ಗಿರಿಜಾ ಕೊಲೆಯಾದ ದುರ್ದೈವಿ. ಗಿರಿ ಎಂಬಾತನೇ ಪ್ರೇಯಸಿಯನ್ನೇ ಕೊಲೆ ಮಾಡಿದ ಆರೋಪಿ. ಭಾನುವಾರ ಆರೋಪಿ ಪೊಲೀಸರಿಗೆ ಶರಣಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. 10 ವರ್ಷಗಳ ಹಿಂದೆ ಗಿರಿಜಾ ಚೆಂಚು ಮುನಿ ಎಂಬಾತನ ಮದುವೆಯಾಗಿದ್ದಳು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಅದೇ ಹಳ್ಳಿಯ ನಿವಾಸವಾದ ಗಿರಿ ಎಂಬವನ ಜೊತೆ ಗಿರಿಜಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಸ್ಥಳೀಯರು ಹೇಳಿದ್ದಾರೆ.

ಇತ್ತ ಗಿರಿಗೆ ತನ್ನ ಪ್ರೇಯಸಿ ಗಿರಿಜಾ ಬೇರೆಯೊಬ್ಬನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಶಂಕಿಸಿದ್ದಾನೆ. ನವೆಂಬರ್ 13 ರಂದು ಗಿರಿಜಾ ಮತ್ತು ಗಿರಿ ಕೃಷಿ ತೋಟದಲ್ಲಿ ಮಾತನಾಡಲು ಭೇಟಿಯಾಗಿದ್ದರು. ಇದೇ ವಿಚಾರದ ಬಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಕೋಪಗೊಂಡ ಗಿರಿ ಲಾಂಗ್‍ನಿಂದ ಗಿರಿಜಾಗೆ ಹೊಡೆದಿದ್ದಾನೆ. ಪರಿಣಾಮ ಗಿರಿಜಾ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಬಳಿಕ ಗಿರಿ ಬ್ಯಾಗಿಗೆ ಗಿರಿಜಾಳ ದೇಹವನ್ನು ತುಂಬಿ ಬಾವಿಗೆ ಬಿಸಾಕಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಗಿರಿಜಾ ತುಂಬಾ ದಿನಗಳಾದರೂ ಪತ್ತೆಯಾಗಿಲ್ಲ ಎಂದು ಪತಿ ಶುಕ್ರವಾರ ರಾತ್ರಿ ಕಳೆದ 10 ದಿನಗಳಿಂದ ಪತ್ನಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದನು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)