ಬೈಂದೂರು : ಜಿ. ಪಂ ಸದಸ್ಯ ಸುರೇಶ್ ಬಟವಾಡಿ V/S ಎಸ್ ಐ ತಿಮ್ಮೇಶ್ ನೆಡುವೆ ಜಿದ್ದಾಜಿದ್ದಿ

0
241

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (1) ಖಂಡಿಸುವೆ (5) ಅಭಿಪ್ರಾಯವಿಲ್ಲ (0)

 

ಬೈಂದೂರು : ಶಿರೂರು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ ಬಟವಾಡಿಯವರ ಮೇಲೆ ಬೈಂದೂರು ಠಾಣಾ ಎಸ್ ಐ ತಿಮ್ಮೇಶರವರು ಅವ್ಯಾಚ್ಯ ಶಬ್ಧ ಬಳಸಿ ಹಲ್ಲೆ ಮಾಡಿದ ಘಟನೆ ಬೈಂದೂರಿನಲ್ಲಿ ನಡೆಯಿತು.

ಘಟನೆಯ ವಿವರ : ಜಿ.ಪಂ ಸದಸ್ಯ ಸುರೇಶ್ ಬಟ್ವಾಡಿಯವರು ಜನರ ಸಮಸ್ಯೆಗಳಿಗೆ ಸ್ಪಂಧಿಸಿ ಪ್ರಕರಣವೂಂದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಠಾಣೆಗೆ ಹೋದಾಗ ಎಸ್ ಐ ತಿಮ್ಮೇಶರವರು ಕುತ್ತಿಗೆಗೆ ಕೈ ಹಾಕಿ ದೂಡಿದ್ದಲ್ಲದೆ ಅವ್ಯಾಚ ಶಬ್ಧಗಳಿಂದ ನಿಂಧಿಸಿದ್ದಾರೆ. ಅದನ್ನು ವಿರೋಧಿಸಿ ಕ್ಷೇತ್ರ ಬಿಜೆಪಿ ವತಿಯಿಂದ ಬೈಂದೂರು ಆರಕ್ಷರ ಠಾಣಾ ಮುತ್ತಿಗೆ ಹಾಕಿ ಪ್ರತಿಭಟನೆ ನೆಡಸಲಾಯಿತು.

ಶಿರೂರು ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿಯವರು  ಜನಪ್ರತಿನಿಧಿಗಳ ಮೇಲೆ ಈ ರೀತಿ ದೌರ್ಜನ್ಯ ನಡೆಸಿದರೆ ಇನ್ನೂ ಸಾಮಾನ್ಯ ಜನರ ಗತಿಯೇನು ಎಂದು ಹೇಳಿದರು. ಹಾಗೇ ಮೇಲಾಧಿಕಾರಿಯನ್ನು ವರ್ಗಾಯಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕುರಿತು ಸ್ಪಂಧಿಸಿದ ಕುಂದಾಪುರ ಡಿ.ವೈ.ಎಸ್.ಪಿ ದಿನೇಶ್ ಕುಮಾರ್ ಇಲಾಖಾ ವ್ಯಾಪ್ತಿಯಲ್ಲಿ ಪ್ರತಿ ಅಧಿಕಾರಿಯು ಅವರ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.ಜನಪ್ರತಿನಿಧಿಗಳ ನಿಂಧನೆ ಕುರಿತು ಹಾಗೂ ಪ್ರಕರಣದ ಕುರಿತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಮಾಹಿತಿ ನೀಡುತ್ತೇನೆ ಎಂದರು.ಸಮರ್ಪಕ ಕ್ರಮ ಕೈಗೊಳ್ಳುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ಠಾಣಾಧಿಕಾರಿಗಳು ಕಾಂಗ್ರೆಸ್ ಪಕ್ಷದ ಕೈಗೊಂಬೆಯಂತೆ ವತಿ೯ಸಿದ್ದಾರೆ.ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಆಕ್ರಮಗಳ ಬಗ್ಗೆ ಎನು ಕ್ರಮಕೈಗೊಂಡಿಲ್ಲ.ಜನರ ಸಮಸ್ಯೆಗಳನ್ನು ಅರಿತು ಸ್ಪಂಧಿಸಲು ಬಂದ ಜಿ.ಪಂ ಸದಸ್ಯರ ಮೇಲೆ ಅಧಿಕಾರದ ದುರುಪಯೋಗ ಮಾಡಿ ದರ್ಪ ಮೆರೆದಿದ್ದಾರೆ.ಇದರ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಮರ್ಪಕ ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಬಾಬು ಶೆಟ್ಟಿ, ತಾ.ಪಂ ಸದಸ್ಯ ಪುಷ್ಪರಾಜ್ ಶೆಟ್ಟಿ,ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು,ದೀಪಕ್ ಕುಮಾರ್ ಶೆಟ್ಟಿ, ಬಾಲಚಂದ್ರ ಭಟ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (9) ಸಮ್ಮತ (1) ಅಸಮ್ಮತ (1) ಖಂಡಿಸುವೆ (5) ಅಭಿಪ್ರಾಯವಿಲ್ಲ (0)