ಬೈಂದೂರು : ಜೆಡಿ(ಎಸ್) ಬೆಂಬಲಿಸಲು ಜನತೆಯಲ್ಲಿ ಸಿಪಿಎಂ ಮನವಿ

0
1011

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ದೇಶದ ಜನರ ಸಂಪತ್ತನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಲೂಟಿ ಮಾಡಲು ಅನುಕೂಲ ಮಾಡಿಕೊಡುತ್ತಿರುವ ಕಾರ್ಮಿಕರ ಕಾನೂನುಗಳನ್ನು ಸುಧಾರಣೆಯ ಹೆಸರಿನಲ್ಲಿ ಮಾಲೀಕರ ಪರವಾಗಿ ತಿದ್ದುಪಡಿ ಗೆ ಮುಂದಾಗಿರುವ ಬಿಜೆಪಿಯನ್ನು ಬೈಂದೂರು ಲೋಕಸಭಾ ಉಪಚುನಾವಣೆಯಲ್ಲಿ ಸೋಲಿಸಲು ಜೆಡಿ(ಎಸ್) ಅಭ್ಯರ್ಥಿ ಮಧುಬಂಗಾರಪ್ಪ ರವರನ್ನು ಬೆಂಬಲಿಸಬೇಕೆಂದು ಸಿಪಿಐ(ಎಂ)ಬೈಂದೂರು ವಲಯ ಸಮಿತಿಯು ಬೈಂದೂರು ವಿಧಾನ ಸಭಾ ಕ್ಷೇತ್ರದ ಜನರಲ್ಲಿ ವಿನಂತಿಸಿದೆ.

ಮುಖ್ಯಮಂತ್ರಿ ಕನಸು ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಚುನಾವಣೆಗೆ ಜನರನ್ನು ದೂಡಿದ ಯಡಿಯೂರಪ್ಪ ತಮ್ಮ ಮಗನನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ.ಯಡಿಯೂರಪ್ಪನವರು ಸಂಸದರಾಗಿದ್ದಾಗ ಬೈಂದೂರು ಅಭಿವ್ರದ್ಧಿಯನ್ನು ನಿರ್ಲಕ್ಷ್ಯ ಮಾಡಿರುವುದು ಜನತೆ ಮರೆತಿಲ್ಲ.ಬೈಂದೂರು,ಉಪ್ಪುಂದ  ಅಂಡರ್ ಪಾಸ್ ಜನರ ವಿರೋಧ ಇದ್ದಾಗ್ಯೂ ಮಾತನಾಡಿಲ್ಲ. ರಾಷ್ಟೀಯ ಹೆದ್ದಾರಿ ಕಾಮಗಾರಿ ಶೀಘ್ರಪೂರ್ಣಗೊಳಿಸುವ ಒತ್ತಡ ತರುವ ಕ್ರಮವಹಿಸಿಲ್ಲ. ಬೈಂದೂರು ಜನರಿಗೆ ಅನುಕೂಲವಾಗುವ ರೈಲು ಸೌಲಭ್ಯ ನೀಡಲು ಯಾವುದೇ ಪ್ರಯತ್ನ ಮಾಡಿಲ್ಲ.ಕಸ್ತೂರಿ ರಂಗನ್ ವರದಿ ಜಾರಿ,ಕ್ಷೇತ್ರ ವ್ಯಾಪ್ತಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲೂ ಮಾತನಾಡಿಲ್ಲ, ಜನರ ಸಮಸ್ಯೆಗಳಿಗೆ ಮಧ್ಯಪ್ರವೇಶ ಮಾಡದೇ ಚುನಾವಣೆಗೆ ಮಾತ್ರ ಕಾಣಿಸಿಕೊಳ್ಳುತ್ತಿರುವುದನ್ನು ಸಿಪಿಎಂ ಪಕ್ಷ ಖಂಡಿಸುತ್ತದೆ.ಕೇಂದ್ರದಲ್ಲಿ ಬಿಜೆಪಿ ನೇತ್ರತ್ವದ ಎನ್ ಡಿ ಎ ಆಡಳಿತವು 0.01% ಇರುವ ದೊಡ್ಡ ಬಂಡವಾಳಗಾರರ ಪರವಾದ ನೀತಿ ತಂದು 99.9% ಇರುವ ಕಾರ್ಮಿಕರು,ರೈತರು,ಕ್ರಷಿಕೂಲಿಕಾರರ ವಿರುದ್ಧ ಕಾನೂನುಗಳನ್ನು ರೂಪಿಸುತ್ತಿದೆ.ಅಲ್ಲದೇ ಬೆಲೆ ಏರಿಕೆ,ರೆಫಲ್ ಹಗರಣ,ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾದ ಬಿಜೆಪಿಯನ್ನು ಸೋಲಿಸಲು ಪಕ್ಷದ ಸದಸ್ಯರಿಗೆ,ಸಾಮೂಹಿಕ ಸಂಘಟನೆಗಳ ಕಾರ್ಯಕರ್ತರಿಗೆ  ಪಕ್ಷವು ಕರೆ ನೀಡಿದೆ.ನವಂಬರ್ 03 ರಂದು ನಡೆಯುವ ಚುನಾವಣೆಯಲ್ಲಿ ಜನರು ಮತದಾನದಲ್ಲಿ ಭಾಗವಹಿಸಬೇಕೆಂದು ಜನತೆಯಲ್ಲಿ  ಸಿಪಿಐ(ಎಂ) ಪಕ್ಷವು ಮನವಿ ಮಾಡಿತು.

ಈ ಸಂದರ್ಭದಲ್ಲಿ ಸಿಪಿಐ (ಎಂ)ನ ಜಿಲ್ಲಾ ಮುಖಂಡ ರಾಜೀವ ಪಡುಕೋಣೆ, ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಹಂಚು ಕಾರ್ಮಿಕರ ಪ್ರದಾನ ಕಾರ್ಯದರ್ಶಿ ಎಚ್. ನರಸಿಂಹ,  ಐ.ಪಿ.ಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಕೆ.ಶಂಕರ ಬೆಂಬಲ ಸೂಚಿಸಿದರು.

ಸಿಪಿಐ(ಎಂ)ಬೈಂದೂರು ವಲಯ ಸಮಿತಿ ಕಾರ್ಯದರ್ಶಿ   ಸುರೇಶ್ ಕಲ್ಲಾಗರ  ಪ್ರಕಟಣೆಯಲ್ಲಿ ತಿಳಿಸಿದರು,

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)