ಕಾರ್ಮಿಕ ಮುಖಂಡ ರವಿ ಶೆಟ್ಟಿಗೆ ಒಲಿದು ಬಂದ ಗೌರವ ಡಾಕ್ಟರೇಟ್

0
231

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (12) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)

  

ಬೈಂದೂರು : ಕರ್ನಾಟಕ ಕಾರ್ಮಿಕರ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ನಾಲ್ಕೈದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದು ಈಗ ಮೊನ್ನೆ ತಾನೇ ಕರ್ನಾಟಕ ರಾಜ್ಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ ರವಿ ಶೆಟ್ಟಿ ಬೈಂದೂರು ಇವರಿಗೆ ಇಂಟರ್ನ್ಯಾಷನಲ್ ಓಪನ್ ಯೂನಿವರ್ಸಿಟಿಗಳಲ್ಲಿ ಒಂದಾದ  international peace university germany  (accredited by global accreditation council germany) ಇವರ ವತಿಯಿಂದ ರವಿ ಶೆಟ್ಟಿ ಅವರ ಸಮಾಜ ಸೇವೆಯನ್ನು ಗುರುತಿಸಿ ಗೌರವ  ಡಾಕ್ಟರ್ ಆಫ್ ಸೋಶಿಯಲ್ ವರ್ಕ್ಸ್ ನೀಡಿ ಗೌರವಿಸಿದೆ .

ತಮಿಳುನಾಡಿನ ಪ್ರಖ್ಯಾತ ತ್ರಿ ಸ್ಟಾರ್ ಹೋಟೆಲ್ ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಬ್ರಿಟಿಷ್ ಕೌನ್ಸಿಲ್ . ಗ್ಲೋಬಲ್ ಕೌನ್ಸಿಲ್ . ಅಕೆಡೆಮಿಕ್ accreditation UK .ಜೊತೆ ಸೇರಿ ಹದಿನಾರಕ್ಕೂ ಹೆಚ್ಚು ಯೂನಿವರ್ಸಿಟಿಗಳು ಪಾಲ್ಗೊಂಡು ಡ್ಯಾನ್ ಐಪಿಒ ಫೌಂಡರ್ ಚೇರ್ಮನ್ . ಡೈರೆಕ್ಟರ್ ಚೇರ್ಮನ್ ಗ್ಲೋಬಲ್ ಅಕಾಡೆಮಿ ಕೌನ್ಸಿಲ್ . ರಿಜಿಸ್ಟ್ರಾರ್ ಯವಲೇಶಿಯನ್ ಬೋರ್ಡ್ . ತಮಿಳು ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಡಾಕ್ಟರ್ ಆನಂದ್ ಕಿಡ್ನಿ ಹೆಲ್ಪ್ಪಿಂಗ್ ಫೌಂಡೆಷನ್ ಮತ್ತಿತರ ಗಣ್ಯರು ಸೇರಿ ರವಿ ಶೆಟ್ಟಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು .

ಪದವಿ ಪ್ರದಾನ ಮಾಡಿ ಮಾತನಾಡಿದ ಡಾಕ್ಟರ್ ಆನಂದ್ ರವಿ ಶೆಟ್ಟಿ ಅವರು ಅತಿಕಿರಿಯ ವಯಸ್ಸಿನಲ್ಲಿ ಸಮಾಜ ಸೇವೆಯಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಹಳಷ್ಟು ಯುವ ಜನತೆಗೆ ಮಾರ್ಗದರ್ಶಕರಾಗಿರುವುದನ್ನು ಮತ್ತು ಅವರಲ್ಲಿರುವ ಡಾಕ್ಟರೇಟ್ ಗೌರವವನ್ನು ಪಡೆಯುವ ಅರ್ಹತೆಯನ್ನು ಪರಿಶೀಲಿಸಿ ಅವರ ಸೇವೆಗೆ ಸಾರ್ಥಕತೆ ನೀಡುವ ಮತ್ತು ಅವರನ್ನು ಇನ್ನಷ್ಟು ಸೇವೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಗೌರವ ಡಾಕ್ಟರೇಟ್ ಸೋಷಿಯಲ್ ವರ್ಕ್ಸ್ ನೀಡಿ ಗೌರವಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಇಂಟರ್ನ್ಯಾಷನಲ್ ಪೀಸ್ ಯುನಿವರ್ಸಿಟಿ ಜರ್ಮನಿ ಇದರ ವತಿಯಿಂದ ಬೇರೆ ಬೇರೆ ದೇಶ ಮತ್ತು ರಾಜ್ಯಗಳ ಒಟ್ಟು ನಲವತ್ತು ಜನರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು .

ಈ ಸಂದರ್ಭದಲ್ಲಿ ಮಾತನಾಡಿದ ರವಿ ಶೆಟ್ಟಿ ನನಗೆ ಗೌರವ ಡಾಕ್ಟರೇಟ್ ಬಂದಿರುವುದು ಆಶ್ಚರ್ಯವಾಗಿದೆ ನಾನು ಹದಿನೈದು ವರ್ಷಗಳಿಂದ ಜನರಿಗೆ ನನ್ನ ಕೈಲಾದ ಅಳಿಲು ಸೇವೆ ಮಾಡುತ್ತಾ ಬಂದಿದ್ದು ಅದಕ್ಕೆ ಇಷ್ಟು ದೊಡ್ಡ ಪ್ರತಿಫಲ ದೊರೆತಿರುವುದು ಅತೀವ ಸಂತೋಷ ಮತ್ತು ಅತಿ ಹೆಚ್ಚು ಜವಾಬ್ದಾರಿಯನ್ನು ತಂದಿದೆ . ಈ ಒಂದು ನನ್ನ ಸೇವೆಯನ್ನು ಗುರುತಿಸಲು ಕಾರಣ ಮುಖ್ಯವಾಗಿ ಮಾಧ್ಯಮ ಬಂಧುಗಳು ಮತ್ತು ನನ್ನ ಕಾರ್ಮಿಕ ಸಂಘಟನೆಯ ಮುಖಂಡರುಗಳು ರಾಜ್ಯಾಧ್ಯಕ್ಷರು ಹಾಗೂ ಎಲ್ಲ ಕಾರ್ಮಿಕ ವರ್ಗ ಹಾಗೂ ಇಂದು ನಮ್ಮೊಂದಿಗಿಲ್ಲದ ಮಗು ಅನುಷಾ ಗೌಡ . ಈ ಗೌರವ ಪ್ರಶಸ್ತಿ ಇವರಿಗೆಲ್ಲರಿಗೂ ಸೇರಬೇಕಾದದ್ದು ಅವರಿಗೆ ಇದು ಅರ್ಪಣೆ  ಎಂದು ಹೇಳಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (12) ಸಮ್ಮತ (0) ಅಸಮ್ಮತ (0) ಖಂಡಿಸುವೆ (4) ಅಭಿಪ್ರಾಯವಿಲ್ಲ (0)