ವಜ್ರದುಂಬಿ ಗೆಳೆಯರ ಬಳಗ (ರಿ) ಬಿಜೂರು ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರ ಹಾಗೂ ಔಷದಿ ವಿತರಣೆ

0
282

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

      

ವಜ್ರದುಂಬಿ ಗೆಳೆಯರ ಬಳಗ (ರಿ) ಬಿಜೂರು ವತಿಯಿಂದ ಜಿಲ್ಲಾ ಮಟ್ಟದ ಬೃಹತ್ ಉಚಿತ ಚರ್ಮ ರೋಗ ಚಿಕಿತ್ಸಾ ಶಿಬಿರ ಹಾಗೂ ಔಷದಿ ವಿತರಣೆಯು ಉಪ್ಪುಂದ ಸಭಾಭವನದಲ್ಲಿ ನಡೆಯಿತು.

ಶಿಬಿರವನ್ನು ಕೆ.ಎಂ.ಸಿ ಆಸ್ಪತ್ರೆ ಮಣಿಪಾಲದ ಚರ್ಮರೋಗ ತಜ್ಞರಾದ ಡಾ| ಸತೀಶ್ ಪೈ ಉದ್ಘಾಟಿಸಿದರು. ವಜ್ರದುಂಬಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬೃಟು ವಹಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಸುಧಾಕರ ನಾರಂಬಳ್ಳಿ, ಸಂಸ್ಥೆಯ ಕಾನುನೂ ಸಲಹೆಗಾರರಾದ ವಕೀಲರು ರಾಘವೇಂದ್ರ ಉಪ್ಪುಂದ, ವೆಂಕ್ಟ ಪೂಜಾರಿ ಸಸಿಹಿತ್ಲು, ಜಗದೀಶ ದೇವಾಡಿಗ ಹಾಗೂ ಅರಹಾಡಿ ಮಂಜುದೇವಾಡಿಗ ಉಪಸ್ಥಿತರಿದ್ದರು.

ಕಳೆದ ನಾಲ್ಕು ವರ್ಷಗಳಿಂದ ಆಯೋಜಿಸಿಕೊಂಡು ಬಂದಿರುವಂತಹ ಈ ಒಂದು ಶಿಬಿರದಲ್ಲಿ ಈ ಬಾರಿ ಶಿಬಿರಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಸಂಸ್ಥೆಯ ಪರ ಪ್ರಶಂಶೆ ವ್ಯಕ್ತವಾಗಿದೆ.

8 ಜನ ವೈದ್ಯರ ತಂಡ ಶಿಬಿರದಲ್ಲಿ ಪಾಲ್ಗೊಂಡಿದ್ದು ಸುಮಾರು 720ಕ್ಕೂ ಮೀರಿ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಔಷದಿ ವಿತರಣೆಯನ್ನು ಮಾಡಲಾಯಿತು.

ವರದಿ : ಪುರುಷೋತ್ತಮ್ ಉಪ್ಪುಂದ
ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)