ಪತ್ನಿ ಸೆಕ್ಸ್‌ಗೆ ಒಪ್ಪುತ್ತಿಲ್ಲ ಎಂದು ಪತಿ ಮಾಡಿದ್ದೇನು ಗೊತ್ತಾ?

0
183

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಚೆನ್ನೈ: ಪತ್ನಿ ಸೆಕ್ಸ್‍ಗೆ ಒಪ್ಪುತ್ತಿಲ್ಲವೆಂದು ಸಿಟ್ಟುಗೊಂಡು ಪತಿ, ಮಲಗಿದ್ದ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದ ಘಟನೆ ತಮಿಳುನಾಡಿನ ತ್ರಿಚಿಯ ತಿರುವೆರಂಬುರ್ ಎಂಬಲ್ಲಿ ನಡೆದಿದೆ.

ಜೆಸಿಂತಾ( 26 ) ಪತಿಯಿಂದ ಹತ್ಯೆಯಾದ ದುರ್ದೈವಿ. ಪತಿ ಸಗಯರಾಜ್(34) ಪತ್ನಿಯನ್ನು ಕತ್ತು ಹಿಸುಕಿ ಬರ್ಬರವಾಗಿ ಕೊಲೆಗೈದಿದ್ದಾನೆ. ಸಗಯರಾಜ್, ಇನ್ಶುರೆನ್ಸ್ ಕಂಪನಿಯೊಂದರಲ್ಲಿ ಏಜೆಂಟ್ ಆಗಿದ್ದು, ಕೆಲಸಕ್ಕೆ ಸರಿಯಾಗಿ ಹೋಗುತ್ತಿರಲಿಲ್ಲ. ಹೀಗಾಗಿ ಮೊದಲು ಈ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಆಗಾಗ ಜಗಳ ಆಗುತ್ತಿತ್ತು.

ಶನಿವಾರ ರಾತ್ರಿ ಸೆಕ್ಸ್ ವಿಚಾರವಾಗಿ ಮತ್ತೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ತನ್ನ ಜೊತೆ ಸೆಕ್ಸ್ ಮಾಡಲು ಯಾಕೆ ಒಪ್ಪುತ್ತಿಲ್ಲವೆಂದು ಪತಿ, ಪತ್ನಿ ಜೊತೆ ಜಗಳ ಶುರು ಮಾಡಿದ್ದಾನೆ. ಈ ಗಲಾಟೆಯ ಬಳಿಕ ಜೆಸಿಂತಾ ನಿದ್ದೆಗೆ ಜಾರಿದ್ದರು. ಆದ್ರೆ ಪತಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಅಂತ ತಿರುವೆರಂಬುರ್ ಪೊಲೀಸ್ ಇನ್ಸ್ ಪೆಕ್ಟರ್ ಜ್ಞಾನವೇಲನ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಆರೋಪಿ ಪತಿ ಕಟ್ಟೂರಿನ ಡಿ ಶಂಕರ್ ಸಗಯರಾಜ್ ನನ್ನು ತಿರುವೆರಂಬುರ್ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)