ಸ್ವಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ

0
172

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಬೈಂದೂರು : ಜೆಸಿಐ ಬೈಂದೂರು ಸಿಟಿ, ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ, ಮಾರಿಕಾಂಬ ಯೂತ್ ಕ್ಲಬ್, MB ಎಜ್ಯುಕೇಶನ್ ಟ್ರಸ್ಟ್, DDU-GKY ಕೇಂದ್ರ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಚತಾ ಹೀ ಸೇವಾ ಆಂದೋಲನವು ದೀನ್ ದಯಾಳ ಗ್ರಾಮೀಣ ಕೌಸಲ್ಯ ಅಭಿವೃದ್ಧಿ ಕೇಂದ್ರ ಉಪ್ಪುಂದದಲ್ಲಿ ನಡೆಯಿತು.

ಬೈಂದೂರು ವೈದ್ಯಾಧಿಕಾರಿ ಪ್ರೇಮಾನಂದ ಶೆಟ್ಟಿ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದರು ಹಾಗೇ ಘನ ಹಾಗೂ ದ್ರವ ತ್ಯಾಜ್ಯದ ವಿಲೇವಾರಿ ಹೇಗೆ ಮಾಡಬೇಕು ಎನ್ನುವುದನ್ನು ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪ್ಪುಂದ ಸಾಹಿತಿ ಯು.ಸಿ ಹೊಳ್ಳ, ಬಾಸ್ಕರ್ ಪೂಜಾರಿ ಪಡುವರಿ, ಬೈಂದೂರು ಜೆಸಿರೆಟ್ ಅಧ್ಯಕ್ಷೆ  ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.

ಬೈಂದೂರು ಸಿಟಿ ಜೆಸಿಐ ಅಧ್ಯಕ್ಷ ಮಣಿಕಂಠ ಕಾರ್ಯಕ್ರಮವನ್ನು ನಿರೂಪಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)