ಅಪಘಾತದಿಂದ ಮೃತಪಟ್ಟರೆ 15 ಲಕ್ಷ ವಿಮೆ ಸೌಲಭ್ಯ

0
191

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನವದೆಹಲಿ;ಅಪಘಾತ ಸಂಭವಿಸಿ ವಾಹನ ಮಾಲಕರು ಅಥವಾ ಹಿಂಬದಿ ಪ್ರಯಾಣಿಕರಲ್ಲಿ ಯಾರೇ ಸಾವನ್ನಪ್ಪಿದರು ಅವರಿಗೆ 15 ಲಕ್ಷ ರೂ ಪರಿಹಾರ ಮೊತ್ತ ಇನ್ನು ಮುಂದೆ ಸಿಗಲಿದೆ.

ಈ ಸಂಬಂಧ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಕೆಲವೊಂದು ಬದಲಾವಣೆಗಳನ್ನು ಮಾಡಿದ್ದು ವಿಮಾ ಕಂತಿನ ಮೊತ್ತವನ್ನು ಹೆಚ್ಚಳ ಮಾಡಿಕೊಳ್ಳಲು ವಿಮಾ ಕಂಪೆನಿಗಳಿಗೆ ಅವಕಾಶವನ್ನು ನೀಡಲಾಗಿದೆ .ಹೀಗಾಗಿ ವಿಮಾ ಪ್ರೀಮಿಯಂ ನಲ್ಲಿ ಕನಿಷ್ಠ 750 ರೂಪಾಯಿ ಹೆಚ್ಚಳವಾಗಬಹುದು ಎಂದು ಅಂದಾಜಿಸಲಾಗಿದೆ.

2011 ಪ್ರಕರಣವೊಂದರ ಹಿನ್ನೆಲೆಯಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ. ವಾಹನ ಮಾಲಕ ಹಿಂಬದಿಯಲ್ಲಿ ಕುಳಿತಿದ್ದ ಮತ್ತೊಬ್ಬರು ಬೈಕ್ ಓಡಿಸಿದ್ದರು. ಸೈಕಲ್ ಸವಾರ ನೊಬ್ಬ ಅಡ್ಡ ಬಂದ ಕಾರಣ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿತ್ತು.ಘಟನೆಯಲ್ಲಿ ಹಿಂಬದಿ ಸವಾರ ಸಾವನ್ನಪ್ಪಿದ. ಮೋಟಾರ್ ಅಪಘಾತ ನ್ಯಾಯಮಂಡಳಿ ಈ ಪ್ರಕರಣದಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ 53 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿತ್ತು. ಆದರೆ ಈ ಆದೇಶ ಪ್ರಶ್ನಿಸಿದ ವಿಮಾ ಕಂಪನಿ ಮೇಲ್ಮನವಿ ಸಲ್ಲಿಸಿದ್ದು ಅಲ್ಲದೆ ಹೆಚ್ಚಿನ ಪರಿಹಾರ ಹಣ ಕೇವಲ ಥರ್ಡ್ ಪಾರ್ಟಿಗೆ ಅಷ್ಟೇ ಅನ್ವಯವಾಗಲಿದ್ದು ಮಾಲಕರಿಗೆ ಅನ್ವಯಿಸುವುದಿಲ್ಲ. ಅವರಿಗೆ ಕೇವಲ ಒಂದು ಲಕ್ಷ ರು ಮಾತ್ರ ಪರಿಹಾರ ಸಿಗಲಿದೆ ಎಂದು ವಾದಿಸಿತ್ತು.

ಈಗ ಈ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದ್ದು ಇನ್ನು ಮುಂದೆ ವಾಹನ ಓಡಿಸುವವರು ಅಥವಾ ಹಿಂಬದಿ ಕುಳಿತವರಿಗೆ ಅದು ಯಾವುದೇ ವಾಹನ ವಾಗಿದ್ದರು ಕನಿಷ್ಠ ವಿಮಾ ಪರಿಹಾರ ವಾಗಿ 15 ಲಕ್ಷ ರೂ ನೀಡಬೇಕೆಂದು ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)