ಎಚ್ಚರ- ನಿಮ್ಮ ಫೇಸ್ ಬುಕ್ ಪಾಸ್ವರ್ಡ್ ಇಲ್ಲಿ ಸಿಗುತ್ತೆ!

0
204

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ನೀವು ನಿಮ್ಮ ಫೇಸ್ ಬುಕ್ ಖಾತೆ ಲಾಗಿನ್ ಆಗುವಾಗ ಹಾಕುವ ಪಾಸ್ವರ್ಡ್ ಪಕ್ಕದಲ್ಲಿ ಇರುವವರಿಗೆ ತಿಳಿಯದಂತೆ ಸಾಕಷ್ಟು ಜಾಗ್ರತೆ ವಹಿಸುತ್ತೀರಿ. ಆದರೆ ಈ ಫೇಸ್ ಬುಕ್ ಪಾಸ್ ವರ್ಡ್ ಅನ್ಯರಿಗೆ ಸುಲಭವಾಗಿ ಸಿಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ

ಇತ್ತೀಚೆಗೆ ಫೇಸ್ ಬುಕ್ 5ಕೋಟಿ ಖಾತೆದಾರರ ಖಾತೆ ಮಾಹಿತಿ ಹ್ಯಾಕ್ ಆಗಿದೆ ಎಂದು ಬಹಿರಂಗಗೊಂಡಿತ್ತು. ಖಾತೆ ಮಾಹಿತಿಯನ್ನು ಕದ್ದ ಹ್ಯಾಕರ್ ಗಳು ಈಗ ಈ ಮಾಹಿತಿಯನ್ನು ಡಾರ್ಕ್ ವೆಬ್ ನಲ್ಲಿ 200 ರೂ ಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲಿ ಖಾತಿ ಲಾಗಿನ್ ಐಡಿ ಹಾಗೂ ಪಾಸ್ವರ್ಡ್ಗಳು ಸಿಗುತ್ತದೆ. ಈ 5 ಕೋಟಿ ಖಾತೆಗಳ ಡೇಟಾ ಮೌಲ್ಯ ಸುಮಾರು 3000ದಿಂದ 4000 ಕೋಟಿ ರೂ ಆಗಿರಲಿದೆ ಎಂದು ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿದೆ.

ಈ ಮಾಹಿತಿಯನ್ನು ಅಪರಾಧಿಗಳು ಬ್ಲಾಕ್ ಮೇಲ್ ನಂತಹ ಕುಕೃತ್ಯಗಳಿಗೆ ಬಳಸಬಹುದಾಗಿದೆ ಅಷ್ಟೇ ಅಲ್ಲ ಈ ಖಾತೆಗಳಿಗೆ ಇ-ಮೇಲ್ ಮತ್ತು ಫೋನ್ ನಂಬರ್ ಲಿಂಕ್ ಮಾಡಿರುವುದರಿಂದ ಮೋಸದ ಈಮೇಲ್ ಗಳು ಇನ್ ಬಾಕ್ಸ್ ತುಂಬುವ ಸಾಧ್ಯತೆ ಇದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)