ಜೆಸಿಐ ಸಪ್ತಾಹದ ಅಂಗವಾಗಿ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಗಾರ

0
280

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಶಿರೂರು: ಜೆಸಿಐ ಶಿರೂರು ಇದರ ಸಾಥ್ ಸುರ್ ಪರಿಸರ ಸ್ನೇಹಿ ಜೆಸಿಐ ಸಪ್ತಾಹದ ಅಂಗವಾಗಿ ಅಳ್ವೆಗದ್ದೆಯಲ್ಲಿ ‘ಜೀವಜಲವೆಂಬ ಮಕರಂದ’ ಮಳೆ ಕೊಯ್ಲು ಮಾಹಿತಿ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೈಂದೂರು ಜನತಾ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕ ಪ್ರಕಾಶ ಮಾಕೋಡಿ ಉಪನ್ಯಾಸ ಮಾಡಿ ನಮ್ಮ ನಿತ್ಯ ಜೀವನದಲ್ಲಿ ನೀರಿನ ಉಪಯುಕ್ತತೆ, ಅದರ ಸಮರ್ಪಕ ಬಳಕೆಗೆ ಅಗತ್ಯ ಕ್ರಮ, ಮಳೆ ನೀರು ಕೊಯ್ಲು ಇದರ ಅಳವಡಿಕೆಗೆ ಬೇಕಾಗುವ ಪೂರ್ವ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ಈ ಯೋಜನೆಯನ್ನು ತಮ್ಮ ಸ್ವ ಗೃಹದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿರುವ ತಿಮ್ಮಪ್ಪ ಎನ್ ಅಳ್ವೆಗದ್ದೆ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಡಿ.ಸಿ.ಸಿ ಬ್ಯಾಂಕ್ ಕೊಲ್ಲೂರು ಶಾಖೆಯ ಶಾಖಾ ವ್ಯವಸ್ಥಾಪಕರಾದ ಸುರೇಶ ಟಿ. ಅಳ್ವೆಗದ್ದೆ ಇವರು ಉಪಸ್ಥಿತರಿದ್ದರು. ಜೆಸಿಐ ಶಿರೂರು ಇದರ ಅಧ್ಯಕ್ಷರಾದ ಪಾಂಡುರಂಗ ಅಳ್ವೆಗದ್ದೆ ಅಧ್ಯಕ್ಷತೆ ವಹಿಸಿದರು.

ಪ್ರಸಾದ ಪ್ರಭು, ಹರೀಶ ಶೇಟ್, ನಾಗೇಂದ್ರ ಪ್ರಭು, ವಿನೋದ ಮೇಸ್ತ, ರಮೇಶ ನಾಯ್ಕ, ರಾಜೇಶ ಪೂಜಾರಿ, ಕೃಷ್ಣ ಎನ್ ಪೂಜಾರಿ, ಶ್ವೇತಾ ಪಾಂಡುರಂಗ ಇತರರು ಉಪಸ್ಥಿತರಿದ್ದರು.

ಗಿರೀಶ ಮೇಸ್ತ ಸ್ವಾಗತಿಸಿದರು. ಶ್ರೀಕಾಂತ ಕಾಮತ್ ವಂದಿಸಿದರು. ಪ್ರಸಾದ ಪ್ರಭು ನಿರೂಪಣೆ ಮಾಡಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)