ಸಿಎಂ ಪಟ್ಟದ ಕನಸಿನಲ್ಲಿರುವ ಯಡಿಯೂರಪ್ಪಗೆ ಆರ್ ಎಸ್ ಎಸ್ ನೀಡಿದೆ ಬಿಗ್ ಶಾಕ್!

0
237

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ಉಂಟಾಗಿರುವ ಕೆಲಗೊಂದಲಗಳ ಲಾಭ ಪಡೆದು ಮತ್ತೆ ಮುಖ್ಯಮಂತ್ರಿ ಗಾದಿಯ ಕನಸು ಕಾಣುತ್ತಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆರ್ ಎಸ್ ಎಸ್ ಬಿಗ್ ಶಾಕ್ ನೀಡಿದೆ.

ಲೋಕಸಬಾ ಚುನಾವಣೆಯಲ್ಲಿ ಉತ್ತಮ ಸ್ಥಾನ ಗಳಿಸುವ ಮೂಲಕ ಮೋದಿ ಅಧಿಕಾರಕ್ಕೆ ಬರಲು ಪ್ಲಾನ್ ಮಾಡುತ್ತಿರುವ ಆರ್ ಎಸ್ ಎಸ್ ಕರ್ನಾಟಕದಲ್ಲಿಯು ಅತ್ಯಧಿಕ ಸ್ಥಾನಪಡೆಯುವ ಉತ್ಸಾಹದಲ್ಲಿದೆ. ಇದೀಗ ಕರ್ನಾಟಕದಲ್ಲಿ ನಡೆಯುತ್ತಿರುವ ಗೊಂದಲಗಳ ಲಾಭ ಪಡೆದು ಬಿಜೆಪಿ ಸರಕಾರ ರಚನೆಯಾದರೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರವನ್ನು ಹಾಕಿರುವ ಕರ್ನಾಟಕದ ಆರ್ ಎಸ್ ಎಸ್ ಮುಖಂಡರು ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಸರಕಾರ ರಚಿಸುವ ಪ್ರಯತ್ನ ಕೈಬಿಡುವಂತೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸರಕಾರ ರಚನೆಯ ವೇಳೆ ಎಡವಟ್ಟಾದರೆ ಮುಂಬರುವ ಲೋಕಸಭಾ ಚುನಾವಣೆಗೆ ಪ್ರತಿಕೂಲ ಪರಿಣಾಮ ಬೀರುತ್ತೆ ಎಂಬ ಲೆಕ್ಕಾಚಾರ ಆರ್ ಎಸ್ ಎಸ್ ನದು. ಈ ಕಾರಣದಿಂದ ಲೋಕಸಭಾ ಚುನಾವಣೆಯವರೆಗೂ ಇಂತಹ ಪ್ರಯತ್ನಗಳಿಗೆ ಕೈಹಾಕದಂತೆ ಸೂಚಿಸಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)