ಜೆಸಿಐ ಸಪ್ತಾಹದ ಅಂಗವಾಗಿ ಸಂಗೀತ ತಬಲ ಗುರುಗಳಿಗೆ ಸನ್ಮಾನ

0
288

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಶಿರೂರು: ಜೆಸಿಐ ಶಿರೂರು ಇದರ ಸಾತ್ ಸುರ್ ಪರಿಸರ ಸ್ನೇಹಿ ಜೆಸಿಐ ಸಪ್ತಾಹದ ಕಾರ್ಯಕ್ರಮದ ಅಂಗವಾಗಿ ಜೆಸಿಐ ಕಲಾ ಸಂಸ್ಥೆಯ ಸಂಗೀತ ಗುರುಗಳಾದ ವಿದ್ವಾನ್ ಅನಂತ ಹೆಬ್ಬಾರ ಹಾಗೂ ತಬಲ ಗುರುಗಳಾದ ವಿದ್ವಾನ ಬಾಲಚಂದ್ರ ಹೆಬ್ಬಾರ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಶಿರೂರು ಇದರ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆಯವರು ವಹಿಸಿದರು. ಶ್ರೀಮತಿ ಶ್ವೇತಾ ಪಾಂಡುರಂಗ ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು.

ನಾಗೇಶ ಕೆ, ಕೃಷ್ಣ ಎನ್ ಪೂಜಾರಿ, ಸಂಸ್ಥೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಇತರರು ಉಪಸ್ಥಿತರಿದ್ದರು.

ಪದ್ಮಾಕ್ಷ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ ಮಾಕೋಡಿ ವಂದಿಸಿದರು.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)