ಕಬ್ಬು ಬೆಳೆಯುವುದರಿಂದ ಮಧುಮೇಹ ಬರುತ್ತೇ, ಬೇರೆ ಬೆಳೆ ಬೆಳೆಯಿರಿ: ಯೋಗಿ ಆದಿತ್ಯ ನಾಥ್

0
248

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಮೀರತ್: ಅಧಿಕ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಪರೋಕ್ಷವಾಗಿ ಮಧುಮೇಹ( ಸಕ್ಕರೆ ಕಾಯಿಲೆ) ಗೆ ಕಾರಣವಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಹೇಳಿದ್ದಾರೆ.

ಹೆಚ್ಚೆಚ್ಚು ಕಬ್ಬು ಬೆಳೆಯುವುದರಿಂದ ಹೆಚ್ಚೆಚ್ಚು ಸಕ್ಕರೆ ಸೇವನೆಯಾಗುತ್ತದೆ, ಇದು ಸಕ್ಕರೆ ಖಾಯಿಲೆಗೆ ಕಾರಣವಾಗುತ್ತದೆ ಹೀಗಾಗಿ ಕಬ್ಬಿನ ಬದಲು ಬೇರೆ ಬೆಳೆ ಬೆಳೆಯಿರಿ ಎಂದು ರೈತರಿಗೆ ಯೋಗಿ ಆದಿತ್ಯನಾತ್ ಸಲಹೆ ನೀಡಿದ್ದಾರೆ.

ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಕಬ್ಬನ್ನು ಉತ್ತರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. 2017-18ನೇ ಸಾಲಿನ ಕಬ್ಬು ಅರೆಯುವ ಕೆಲಸ ಅಕ್ಟೋಬರ್ 20 ರಿಂದ ನವೆಂಬರ್ 5 ರವರೆಗೆ ನಡೆಯುತ್ತದೆ, ದೇಶದ ಒಟ್ಟು ಸಕ್ಕರೆ ಉತ್ಪಾದನೆಯ 32 ಮಿಲಿಯನ್ ಟನ್ ಸಕ್ಕರೆ ಉತ್ಪಾದನೆ ಉತ್ತರ ಪ್ರದೇಶವೊಂದರಲ್ಲೇ ನಡೆಯುತ್ತದೆ ಎಂದು ಹೇಳಿದ್ದಾರೆ.

ಅಕ್ಟೋಬರ್ 15ರೊಳಗೆ ರೈತರ ಕಬ್ಬಿನ ಹಣ ಪಾವತಿ ಮಾಡದಿದ್ದರೇ ಅಂಥಹ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬಡ ಜನ ಹಾಗೂ ರೈತರನ್ನು ಮುಖ್ಯವಾಹಿನಿಗೆ ತರುವುದು ನಮ್ಮ ಪ್ರಮುಖ ಉದ್ದೇಶವಾಗಿದೆ, ಸಕ್ಕರೆ ಕಾರ್ಖಾನೆ ಮಾಲೀಕರು ಅಕ್ಟೋಬರ್ 15 ರೊಳಗೆ ರೈತರ ಹಣ ಪಾವತಿ ಮಾಡದೇ ಇದ್ದ ಪಕ್ಷದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)