ಶಾಲೆಬಾಗಿಲು: ಕಲ್ಲು ಸಾಗಾಟದ ಲಾರಿ ಅಂಗಡಿಗೆ ಢಿಕ್ಕಿ

0
285

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

  

ಉಪ್ಪುಂದ: ಇಲ್ಲಿನ ಶಾಲೆಬಾಗಿಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಿನಿ ಲಾರಿಯೊಂದು ರಸ್ತೆಯ ಸಮೀಪದ ಅಂಗಡಿಗೆ ನುಗ್ಗಿ ಢಿಕ್ಕಿ ಹೊಡೆದಿರುವ ಘಟನೆ ಸಂಭವಿಸಿದೆ.

ಕೆಂಪು ಕಲ್ಲುಗಳನ್ನು ತುಂಬಿಕೊಂಡು ಬೈಂದೂರಿನಿಂದ ಉಪ್ಪುಂದದ ಕಡೆಗೆ ಬರುತ್ತಿರುವಾಗ ಶಾಲೆಬಾಗಿಲು ಬಳಿ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕ ಬಲ ಬದಿಗೆ ತಿರುಗಿಸಿದಾಗ ಲಾರಿ ನಿಯಂತ್ರಣಕ್ಕೆ ಸಿಗದೆ ಸ್ಥಳೀಯ ಅಂಗಡಿಗೆ ನುಗ್ಗಿದೆ. ಕಲ್ಲುಗಳು ರಸ್ತೆಯ ಮೇಲೆ ಬಿದ್ದವು. ಚಾಲಕ ಮತ್ತು ಸಹಾಯಕ ಅಪಾಯದಿಂದ ಪಾರಾಗಿದ್ದಾರೆ.

ರಾ.ಹೆದ್ದಾರಿಯಲ್ಲಿ ಲಾರಿಯೊಂದು ಯು-ಟರ್ನ್ ಪಡೆಯುತ್ತಿರುವಾಗ ಈ ಸಂದರ್ಭದಲ್ಲಿ ಭಟ್ಕಳದಿಂದ ಕುಂದಾಪುರ ಕಡೆಗೆ ಹೋಗುತ್ತಿರುವ ಕಾರು ತತ್‌ಕ್ಷಣ ನಿಲ್ಲಿಸಿದ್ದು, ಇದನ್ನು ಗಮನಿಸದ ಲಾರಿ ಚಾಲಕ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ತೀರ ಬಲ ಬದಿಗೆ ತಿರುಗಿಸಿದಾಗ ಲಾರಿ ಒಳ ರಸ್ತೆಯನ್ನು ಪ್ರವೇಶಿಸಿ ಪೇಟೆ ರಸ್ತೆಯಲ್ಲಿರುವ ಬೇಕರಿಯ ಎತ್ತರದ ಮೂರು ಮೆಟ್ಟಿಲುಗಳನ್ನು ಹತ್ತಿ, ಪಕ್ಕದ ಅಂಗಡಿಯ ಸಿಮೆಂಟ್‌ ಕಂಬಗಳಿಗೆ ಢಿಕ್ಕಿಯಾಗಿ ಮುನ್ನುಗ್ಗಿ ಮತ್ತೂಂದು ಅಂಗಡಿಯ ಕಲ್ಲಿನ ಗೋಡೆ ಹಾಗೂ ಕಂಬಕ್ಕೂ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ರಭಸಕ್ಕೆ ಸಿಮೆಂಟ್‌ ಕಂಬಗಳು ಬುಡ ಸಹಿತ ಕಿತ್ತು ಹೋಗಿವೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)