ಬೈಂದೂರು : ಹೋಲಿಕ್ರಾಸ್ ಚರ್ಚ್‍ನಲ್ಲಿ ಮೊಂತಿ ಫೆಸ್ತ್ ಸಂಭ್ರಮ ಸಡಗರದ ಆಚರಣೆ

0
225

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

            

ಬೈಂದೂರು :ಕರಾವಳಿಯ ಕ್ರೈಸ್ತರ ಪವಿತ್ರ ಹಬ್ಬ ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಶುಕ್ರವಾರ ಬೆಳಿಗ್ಗೆ ಹೋಲಿಕ್ರಾಸ್ ಶಾಲಾ ಆವರಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಧರ್ಮಗುರು  ರೆ.ಫಾ. ರೊನಾಲ್ಡ್ ಮಿರಾಂದ ರೆ.ಪಾ. ಪೀಟರ್ ರೆಬೆಲ್ಲೋರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆರವಣಿಗೆಯ ಮೂಲಕ ತೆನೆಯನ್ನು ತಂದು ಶುದ್ಧೀಕರಿಸಿ ದಿವ್ಯ ಬಲಿ ಪೂಜೆಯನ್ನು ಮಾಡಲಾಯಿತು. ವಿಧಿ ವಿಧಾನಗಳನ್ನು ಕೈಗೊಂಡ ಬಳಿಕ ನೆರೆದಿದ್ದ ಬಂಧುಗಳಿಗೆ ಕಬ್ಬನ್ನು ಹಂಚಿ ಸಂಭ್ರಮಿಸಿದರು.

ಕ್ರೈಸ್ತರು ಮನೆಗಳಲ್ಲಿ ಕುಟುಂಬ ಸಹಿತ ಹೊಸ ಅಕ್ಕಿ ಊಟ, ಪಾಯಸ ಸೇವಿಸಿ, ಸಾಂಪ್ರದಾಯಿಕ ವೀಳ್ಯದೆಳೆ ತಿಂದು ಖುಷಿಪಡುತ್ತಾರೆ.

 

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)