ವಾಜಪೇಯಿಗೆ ಕರಾವಳಿ ಮೇಲೆ ಅಗಾಧ ಅಭಿಮಾನ

0
1597

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಎಸ್. ಆಚಾರ್ಯರ ಮೇಲೆ ಅಭಿಮಾನ ಪೇಜಾವರ ಶ್ರೀಗಳೆಂದರೆ ಗೌರವ, ರಾಮಭಟ್ಟರ ಜತೆ ಸ್ನೇಹ ಸಂಪರ್ಕ

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಜನಸಂಘದ ಅಧಿಕಾರ ಗದ್ದುಗೆ ಹಿಡಿದ ಉಡುಪಿ (ದಕ್ಷಿಣ ಕನ್ನಡ ಜಿಲ್ಲೆ ‌) ಎಂದರೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅತೀವ ಪ್ರೀತಿ. ಪ್ರಧಾನಿ ಆಗುವ ಮೊದಲೂ ಬಳಿಕವೂ ಉಡುಪಿಗೆ ಆಗಮಿಸುತ್ತಿದ್ದ ವಾಜಪೇಯಿಗೆ ಡಾ.ವಿ.ಎಸ್. ಆಚಾರ್ಯರೆಂದರೇ ಅಭಿಮಾನ

1968ರಲ್ಲಿ ಜನಸಂಘ ದಿಂದ ಉಡುಪಿ ಪುರಸಭೆಯ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದ ವಿ.ಎಸ್. ಆಚಾರ್ಯರ ಕುರಿತು ವಾಜಪೇಯಿ ಅವರಿಗೆ ವಿಶೇಷ ಒಲವು.

ಉಡುಪಿಗೆ ಬಂದಾಗ ವಿ.ಎಸ್.ಆಚಾರ್ಯರ ಜತೆ ರಾಜಕೀಯ ತಂತ್ರಗಳ ಕುರಿತು ಚರ್ಚಿಸುತ್ತಿದ್ದರು. ಪಕ್ಷ ಬಲವರ್ಧನೆ ಕಾರ್ಯ ಕ್ರಮಗಳನ್ನು ಆಚಾರ್ಯರ ಜತೆಯಲ್ಲಿಯೇ ತೆರಳಿ ಸಂಘಟಿಸುತ್ತಿದ್ದರು

ಹೊನ್ನಾವರ, ಕೇರಳ ಮೊದಲಾದ ಕಡೆ ತೆರಳಿರುವುದನ್ನು ವಿ.ಎಸ್.ಆಚಾರ್ಯರ ಪುತ್ರ ಡಾ. ಕಿರಣ್ ಆಚಾರ್ಯ ಸ್ಮರಿಸುತ್ತಾರೆ.

ವಾಜಪೇಯಿ ಅವರು ಗೌರವ ನೀಡುತ್ತಿದ್ದ ಇನ್ನೊಬ್ಬರೆಂದರೆ ಪೇಜಾವರ ಶ್ರೀಗಳು. ರಾಜಕೀಯ, ಧಾರ್ಮಿಕ ವಿಚಾರಗಳ ಕುರಿತು ಸಲಹೆ ಪಡೆಯುತ್ತಿದ್ದರು,ವಿಚಾರ ವಿಮರ್ಶೆ ನಡೆಸುತ್ತಿದ್ದರು.

*ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ಉದ್ಘಾಟಿಸಿದ ಬಳಿಕ ಪೇಜಾವರ ಶ್ರೀಗಳಿಂದ ವಾಜಪೇಯಿ ಸನ್ಮಾನ ಸ್ವೀಕರಿಸಿದ್ದರು.

ನಿಟ್ಟೆ ಕೆ.ಎಸ್.ಹೆಗ್ಡೆ, ಡಾ.ಮಾಧವ ಭಂಡಾರು, ಉಡುಪಿಯ ಸೋಮಶೇಖರ ಭಟ್, ಜಗನ್ನಾಥ ರಾವ್ ಜೋಶಿ ಜತೆ ಆತ್ಮೀಯ ಸಂಪರ್ಕ ಇತ್ತು.

ವಾಜಪೇಯಿ ಕರಾವಳಿ ನೆನಪುಗಳು : 1984 ಇರಬೇಕು.  ಕಣ್ಣೂರಿನಲ್ಲಿ ಚುನಾವಣಾ ಪ್ರಚಾರ ಭಾಷಣಕ್ಕೆ ತೆರಳುವ ಸಂದರ್ಭ ತಂದೆ ವಿ. ಎಸ್ ಆಚಾರ್ಯ ಮತ್ತು ವಾಜಪೇಯಿ ಅವರ ಜತೆ ಕಾರಿನಲ್ಲಿ ಹೋಗಿದ್ದೆೆವು. ಕಿನ್ನಿಮೂಲ್ಕಿಯ ರಾಕಿ ಡಯಾಸ್ ಅವರ ಹೊಸ ಟೊಯೊಟ ಕಾರಿನಲ್ಲಿ ಅವರನ್ನು ಕರೆದುಕೊಂಡು ಹೋಗಲಾಗಿತ್ತು.

ಅವರು ಹಾಸ್ಯ ಪ್ರಜ್ಞೆ ಅಪಾರವಾಗಿ ಹೊಂದಿದ್ದರು. ಹಿಂದಿಯಲ್ಲಿ ಶಾಯಿರಿಗಳನ್ನು ಹೇಳಿ ತಮಾಷೆ ಮಾಡುತ್ತಿಿದ್ದರು. ಅವರೊಂದಿಗೆ ಮಾತನಾಡಿದ ಬಳಿಕ ನನಗೂ ಹಿಂದಿ ಕಲಿಯುವ ಮನಸ್ಸಾಾಗಿ ಒಳ್ಳೆೆಯ ಹಿಂದಿ ಕಲಿತಿದ್ದೇನೆ ಎನ್ಮುತ್ತಾರೆ ದಿ. ಡಾ.ವಿಎಸ್. ಆಚಾರ್ಯ ರ ಮಗ ಡಾ. ಕಿರಣ್ ಆಚಾರ್ಯ.

ಇದರ ಬಳಿಕ ವಾಜಪೇಯಿ ಜತೆ  ಹೊನ್ನಾಾವರಕ್ಕೆ ಹೋಗಿದ್ದೆವು.  ಅವರನ್ನು ಹೊಸ ಮಾರುತಿ ಕಾರಿನಲ್ಲಿ ತಂದೆ ವಿ.ಎಸ್. ಆಚಾರ್ಯರು ಕರೆದುಕೊಂಡು ಹೋಗಿದ್ದರು.

ವಾಜಪೇಯಿ ಕುಳಿತ ಕಾರು ಎಂದು ಅದನ್ನು ಇಂದಿಗೂ ಮಾರಾಟ ಮಾಡದೆ ಶಾಂತಾ ವಿ. ಆಚಾರ್ಯ ಅವರು ಮನೆಯಲ್ಲಿಯೇ  ಇಟ್ಟುಕೊಂಡಿದ್ದಾರೆ.

ಟಿ.ಎ. ಪೈ ಅನಿರೀಕ್ಷಿತ ಭೇಟಿ : ವಾಜಪೇಯಿ ಅವರು ಉಡುಪಿಗೆ ಬಂದಾಗ ಡಾ.ವಿ.ಎಸ್. ಆಚಾರ್ಯರ ಮನೆಗೆ ಬರುತ್ತಿಿದ್ದರು. ಒಮ್ಮೆೆ ವಾಜಪೇಯಿ ಅವರು ಬಂದಾಗ ಟಿ. ಎ. ಪೈ ಅಚಾನಕ್ ಆಗಿ ಆಚಾರ್ಯರವಮನೆಗೆ ಬಂದಿದ್ದರು.  ಕಾಂಗ್ರೆಸ್ ನಿಂಂದ ಗೆದ್ದಿದ್ದರೂ ದೇವರಾಜ್ ಅರಸ್  ಜತೆ ಸೇರಿದ ಬಳಿಕ ಟಿ.ಎ.ಪೈ  ಅತಂತ್ರರಾಗಿದ್ದರು. ಹೀಗಾಗಿ ಟಿ ಎ. ಪೈ ಅವರು ವಾಜಪೇಯಿ ಜತೆ ಭೇಟಿಗೆ ಉತ್ಸುಕರಾಗಿದ್ದರು.

ಹಾಸ್ಯ ಪ್ರಜ್ಞೆ : ವಾಜಪೇಯಿ ಅವರು ರಾಜಕೀಯವಾಗಿ ಮಾತನಾಡಲು ಪ್ರಾಾರಂಭಿಸಿದರೆ  ದೇಶದ ಮುಂದಿನ ಭವಿಷ್ಯದ ಬಗ್ಗೆ ಹೇಳುತ್ತಿದ್ದರು.  ಸಮಾಜಮುಖಿಯಾಗಿ ಹೇಗೆ ಇರಬೇಕು ಎನ್ನುವ ಕುರಿತು  ಮಾತನಾಡುತ್ತಿಿದ್ದರು. ಹೇಳುವುದನ್ನು ಹಾಸ್ಯಭರಿತವಾಗಿ, ಮನ ಮುಟ್ಟುವಂತೆ ಹೇಳುತ್ತಿದ್ದರು ಎನ್ನುತ್ತಾರೆ ಕಿರಣ್ ಆಚಾರ್ಯ.

 ಉರಿಮಜಲು ರಾಮಭಟ್ಟರ ಜತೆಯೂ ವಾಜಪೇಯಿ ಸ್ನೇಹ ಸಂಬಂಧ ಇತ್ತು. ಇದನ್ನು ರಾಮಭಟ್ಟರು‌ನೆನಪಿಸಿಕೊಳ್ಳುವುದು ಹೀಗೆ : ಅಟಲ್ ಬಿಹಾರಿ ವಾಜಪೇಯಿ ಅವರು ತುರ್ತು ಪರಿಸ್ಥಿಿತಿ ಬರುವುದಕ್ಕು ಮೊದಲು ಪುತ್ತೂರಿಗೆ ಒಂದು ಬಾರಿ ಭೇಟಿ ನೀಡಿದ್ದರು. ಅವರು ಜನ ಸಂಘದಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿಿದ್ದ ಸಂದರ್ಭ ಪಕ್ಷವನ್ನು ಸಂಘಟಿಸುವ ನಿಟ್ಟಿಿನಲ್ಲಿ ಪುತ್ತೂರಿಗೆ ಭೇಟಿ ನೀಡಿದ್ದರು. ವಾಜಪೇಯಿ ಅವರ ಜತೆ ಕೆಲವು ಸಮಯ ಕಳೆಯುವ ಸಂದರ್ಭ ಬಂದೊದಗಿತ್ತು.

ಲೀಡರ್ ಮಾತು ಕೇಳಲೇ ಬೇಕು : ನನಗು ಅಂದಿನ ಪಕ್ಷದ ಮುಖಂಟಡರಾದ ಎ. ಕೆ. ಸುಬ್ಬಯ್ಯ ಅವರಿಗು ಕೆಲ ವಿಷಯದಲ್ಲಿ ಮನಸ್ಥಾಾಪವಾಗಿತ್ತು. ಆ ವಿಚಾರವಾಗಿ ಅವರನ್ನು ವಿರೋಧಿಸಿದ್ದೆೆ ಕೂಡ. ಆವಾಗ ಎ. ಕೆ. ಸುಬ್ಬಯ್ಯ ನೇತೃತ್ವದಲ್ಲಿ  ಶಾಸಕರ ತಂಡ ಜಿಲ್ಲೆೆಯಲ್ಲಿ ವಾಜಪೇಯಿ ಅವರನ್ನು ಭೇಟಿಯಾದೆವು. ಆ ಸಂದರ್ಭ ನನಗೆ ವಾಜಪೇಯಿ ಅವರು ಹಿತ ವಚನ ಹೇಳಿದ್ದರು. ನಮ್ಮಲ್ಲಿ ಏನೇ ಭಿನ್ನಾಾಭಿಪ್ರಾಾಯ ಇದ್ದರೂ ಅಂತಿಮವಾಗಿ ನಾಯಕರ ಮಾತು ಕೇಳಲೇಬೇಕು ಎಂದು ಕಿವಿ ಮಾತು ಹೇಳಿದ್ದರು ಎನ್ನುವುದು ಉರಿಮಜಲು ರಾಮ್ ಭಟ್ ಅವರ ಮಾತು.

ಜಿತೇಂದ್ರ ಕುಂದೇಶ್ವರ ವಿಶ್ವವಾಣಿ ಮಂಗಳೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಅಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (1) ಖಂಡಿಸುವೆ (0) ಅಭಿಪ್ರಾಯವಿಲ್ಲ (0)