ಕುಂದಾಪುರ: ನೀರುಪಾಲಾದ ವ್ಯಕ್ತಿಯ ಶವ ಪತ್ತೆ

0
161

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರಮನೆ ಸಮೀಪದ ಹಳ್ಳಕ್ಕೆ ಬಿದ್ದು ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಸಿದ್ದಾಪುರ ಗ್ರಾಮದ ಐರಬೈಲು ನಿವಾಸಿ, ಬಿಎಸ್ಸೆನ್ನೆಲ್‌ ಉದ್ಯೋಗಿ ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದೆ.

ಶಂಕರ ಪೂಜಾರಿ (58) ಆ. 14ರ ಬೆಳಗ್ಗೆ 11.30ಕ್ಕೆ ಸೊಪ್ಪು ತರಲು ಮನೆಯಿಂದ ಹೊರಟವರು ಸಮೀಪವಿರುವ ಹಳ್ಳ ದಾಟುವಾಗ ಕಾಲುಜಾರಿ ನೀರಿಗೆ ಬಿದ್ದಿದ್ದರು. ಮನೆಯವರು, ಸ್ಥಳೀಯರು ಮತ್ತು ಮುಳುಗು ತಜ್ಞರ ಸಹಾಯದಿಂದ ಸಂಜೆಯವರೆಗೂ ಹುಡುಕಾಟ ನಡೆಸಿದ್ದರೂ ಅವರ ಸುಳಿವು ಸಿಕ್ಕಿರಲಿಲ್ಲ.

ಬುಧವಾರ ಅವರು ಬಿದ್ದ ಹಳ್ಳದ ಸಮೀಪ 200 ಮೀಟರ್‌ ದೂರದಲ್ಲಿ ಶವ ಸಿಕ್ಕಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)