ವಂಡ್ಸೆ ಕಾನಮ್ಮ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರಕ್ಕೆ ಸಹೃದಯ ನಾಗರಿಕರಲ್ಲಿ ಮನವಿ

0
456

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (10) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ವಂಡ್ಸೆ ಗ್ರಾಮದ ಹಳಂಡಿಯ ಪ್ರಾಚೀನ ಶ್ರೀ ವನದುರ್ಗಪರಮೇಶ್ವರಿ ದೇವಸ್ಥಾನ ಕಾನಮ್ಮ ದೇವಸ್ಥಾನದ ಜೀರ್ಣೋದ್ದಾರಕ್ಕೆ ಗರ್ಭಗುಡಿ, ಪರಿವಾರ ದೇವರುಗಳ ಪ್ರತಿಷ್ಟಾಪನೆ ಸೇರಿದಂತೆ ದೇವಳದ ಸಮಗ್ರ ಅಭೀವೃದ್ದಿಗೆ ಅಂದಾಜು 80 ಲಕ್ಷಕ್ಕೂ ಅಧಿಕ ವೆಚ್ಚದ ನೀಲ ನಕಾಶೆ ರೂಪಿಸಲಾಗಿದೆ. ಈಗ ಈ ದೇವಸ್ಥಾನದ ಹಂಚಿನ ಮಾಡು (ಛಾವಣಿ) ಸಂಪೂರ್ಣ ಕೆಟ್ಟುಹೋಗಿದೆ. ಮಳೆಗಾಲದಲ್ಲಿ ದೇವರ ಮೂರ್ತಿ ಮೇಲೆ ನೀರು ಬೀಳದಿದ್ದ ಹಾಗೆ ಟರ್ಪಾಲು ಹಾಕಲಾಗಿದೆ. ಈ ದೇವಸ್ಥಾನ ಸರಿ ಮಾಡಲು 4 ವರ್ಷದಿಂದ ಹಾಗೆ ಇದೆ. ವೀರಭದ್ರ, ಕ್ಷೇತ್ರಪಾಲ , ರಕ್ಥೇಶ್ವರಿ, ನಾಗ ದೇವರು ಸೇರಿದಂತೆ ಪ್ರಮುಖ ಪರಿವಾರ ದೇವತೆಗಳ ಕಾಲನ ಹೊಡೆತಕ್ಕೆ ಸಿಲುಕಿ ಜರ್ಜರಿತವಾಗಿದ್ದು ಭಕ್ತರು ದೇವಳ ಜೀರ್ಣೋದ್ದಾರಕ್ಕೆ ಮುಂದಾಗಿದ್ದಾರೆ. ವಂಡ್ಸೆ ಊರಿಗೆ ಈ ದೇವಸ್ಥಾನ ಅತಿ ಮುಖ್ಯವಾಗಿರುತ್ತದೆ. ದೇವಸ್ತಾನದ ಬಾಗಿಲು ಹತ್ತಿರ ಹುತ್ತ ಬೆಳೆಯುತ್ತಿದೆ.

ವಂಡ್ಸೆ ಗ್ರಾಮದ ಅತಿ ಎತ್ತರ ವನಪ್ರದೇಶವಾದ ಹಳಂಡಿ ಎಂಬಲ್ಲಿ ಸುಮಾರು 900 ವರ್ಷಗಳ ಹಿಂದೆ ಈ ಸಾನಿದ್ಯ ಸ್ಥಾಪನೆ ಆಗಿದೆ ಎಂದು ಸ್ವರ್ಣರೂಡ ಪ್ರಶ್ನೆಯಲ್ಲಿ ತಿಳಿದು ಬಂದಿದೆ. ಒಂದು ಕಾಲದಲ್ಲಿ ಈ ದೇವಿಯು ಹುಲಿಯ ರೂಪದಲ್ಲಿ ಗ್ರಾಮವನ್ನು ಸುತ್ತುತ್ತಿದ್ದ ಲಕ್ಷಣವಿದೆ ಎನ್ನುವ ವಿಷಯ ಪ್ರಶ್ನೆಯಲ್ಲಿ ತಿಳಿದುಬಂದಿದೆ. ನಂತರದ ದಿನದಲ್ಲಿ ಬೇರೆ ಬೇರೆ ಕಾರಣಗಳಿಂದ ದೇವಸ್ಥಾನದ ಎಲ್ಲಾ ಕಾರ್ಯ ಚಟುವಟಿಕೆಗಳು ಕುಂಠಿತವಾಗುತ್ತಾ ಬಂದು ಇದೀಗ ದೇವಸ್ಥಾನದ ಗರ್ಭಗುಡಿ ಇತರ ಪರಿವಾರ ದೇವಸ್ಥಾನಗಳು ಕೂಡಾ ಶಿಥಿಲಗೊಂಡಿದೆ.

ಈ ದೇವಿಯ ವಿಶೇಷ ಶಕ್ತಿಯೆಂದರೆ ಸಂತತಿ ಇಲ್ಲದವರು ದೇವಿಯಲ್ಲಿ ಮೊರೆಹೋಗಿ ಸಂತತಿ ಪಡೆದುಕೊಂಡ ಪುರಾವೆಗಳು ಇತ್ತೀಚೆಗಿನ ದಿನಗಳಲ್ಲಿ ಕೂಡಾ ಕಂಡುಬಂದಿದ್ದು ಈ ದೇವಿಯನ್ನು ನಂಬಿದ ಅದೆಷ್ಟೋ ಭಕ್ತರು ತಮ್ಮ ಅಭಿಷ್ಟವನ್ನು ನೇರವೇರಿಸಿಕೊಂಡು ಸಂತೃಪ್ತಿಯಿಂದಿರುವ ಪುರಾವೆಗಳಿವೆ. ಆದರೆ ಈಸ್ಥಳವನ್ನು ಜೀರ್ಣೋದ್ದಾರಗೊಳಿಸಲು ಯಾವದೇ ಆರ್ಥಿಕ ಮೂಲಗಳಿಲ್ಲದುರುವುದರಿಂದ ದೇವಸ್ಥಾನದ ಗರ್ಭಗುಡಿ , ಪರಿವಾರ ದೇವರುಗಳ ಪ್ರತಿಷ್ಟಾಪನೆ ಹಾಗೂ ಇತರ ಹತ್ತು ಹಲವು ದೇವತಾ ಕಾರ್ಯಗಳನ್ನು ವಿಧಿವತ್ತಾಗಿ ಮಾಡಬೇಕಾಗಿರುತ್ತದೆ.

ಈ ಪೂಣ್ಯ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೋಂಡು ಸಹಕರಿಸಬೇಕು ಎಂದು ದೇವಳದ ಜೀರ್ಣೋದ್ದಾರ ಸಮಿತಿ ಮನವಿ ಮಾಡಿಕೊಂಡಿದೆ.

ಜೀರ್ಣೋದ್ದಾರ ಸಮಿತಿಗೆ ಹಣ ನೀಡಬಯಸುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಾಕಬೇಕಾಗಿ ವಿನಂತಿ

ಬ್ಯಾಂಕು ಹೆಸರು : ಸಿಂಡಿಕೇಟ್ ಬ್ಯಾಂಕ ವಂಡ್ಸೆ, ಸಿಂಡಿಕೇಟ್ ಬ್ಯಾಂಕ ಖಾತೆ ಸಂಖ್ಯೆ: 01532200064810
ಬ್ಯಾಂಕಿನ ಖಾತೆಯ ಹೆಸರು. ಶ್ರೀವನದುರ್ಗಾದೇವಿ ದೇವಸ್ಥಾನ…. IFSCCode : SYNB0000153

( ಇನ್ನು ಮಾಹಿತಿ ಬೇಕಿದಲ್ಲಿ ಅರ್ಚಕರನ್ನು ಸಂಪರ್ಕಿಸಿ – ಸುರೇಶ ಐತಾಳ್ – 9845428896.

ವರದಿ : ರಕ್ಷಿತ್ ಶೆಟ್ಟಿ

ಹೆಚ್ಚಿನ ಓದುಗರು ಈ ಸುದ್ದಿಯನ್ನು ಸಮ್ಮತ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (3) ಸಮ್ಮತ (10) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)