ಬೈಂದೂರು : ಸುರಭಿಯಿಂದ ಚಿಣ್ಣರ ರಂಗ ತರಬೇತಿ ಶಿಬಿರ ಉದ್ಘಾಟನೆ

0
248

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಬೈಂದೂರು : ಇಲ್ಲಿನ ಸುರಭಿ ಕಲಾಸಂಸ್ಥೆಯ ರಂಗಸುರಭಿ ಆಶ್ರಯದಲ್ಲಿ ರೋಟರಿ ಕಬ್ಲ್ ನ ಸಹಕಾರದಲ್ಲಿ ಪ್ರಸ್ತುತ ಸಾಲಿನಿಂದ ಪ್ರತಿ ಭಾನಾವಾರದಂದು ಚಿಣ್ಣರಿಗಾಗಿ ಉಚಿತವಾಗಿ ಪ್ರಾರಂಭಿಸಲಾದ ಚಿಣ್ಣರ ರಂಗ ತರಬೇತಿ ವಾರಾಂತ್ಯದ ಶಿಬಿರವನ್ನು ಖ್ಯಾತ ರಂಗ ನಿರ್ದೇಶಕ ಗಣೇಶ ಎಂ ಉಡುಪಿ ಮದ್ದಳೆ ನುಡಿಸುವುದರ ಮೂಲಕ ಉದ್ಘಾಟಿಸಿ, ಸುರಭಿ ಕಲಾ ಸಂಸ್ಥೆಯ ಗ್ರಾಮೀಣ ಭಾಗದಲ್ಲಿ ನಡೆಸುತ್ತಿರುವ ಸಾಂಸ್ಕ್ರತಿಕ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬೈಂದೂರು ರೋಟರಿ ಕಬ್ಲ್ ನ ಅಧ್ಯಕ್ಷ ಐ. ನಾರಾಯಣರವರು ಮಾತನಾಡಿ  ಸುರಭಿ ಸಂಸ್ಥೆಯು ಬೈಂದೂರಿನಲ್ಲಿ ಈಗಾಗಲೇ ನಡೆಸುತ್ತಿರುವ ನೃತ್ಯ, ಸಂಗೀತ, ಯಕ್ಷಗಾನ, ಚಿತ್ರಕಲೆ ಚಂಡೆ ತರಬೇತಿಯೊಂದಿಗೆ ಮಕ್ಕಳ ರಂಗಭೂಮಿಯನ್ನು ಸೇರ್ಪಡೆಗೊಳಿಸುತ್ತಿರುವುದು ಶ್ಲಾಘನೀಯವೆಂದರು ಶಿಬಿರದ ನಿರ್ದೇಶಕ ಯೋಗಿಶ್ ಬಂಕೇಶ್ವರ್ ಶುಭ ಹಾರೈಸಿ ಸುರಭಿ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಗಾಣಿಗ ವಂದಿಸಿ ಸುರಭಿ ನಿರ್ದೇಶಕ ಸುಧಾಕರ ಪಿ ಕಾರ್ಯಕ್ರಮ ನಿರೂಪಿಸಿದರು.

ಈ ಒಂದಿ ಉಚಿತ ರಂಗ ತರಬೇತಿ ಶಿಬಿರದಲ್ಲಿ ಈಗಾಗಲೇ ಸುಮಾರು 40ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಬೈಂದೂರು ಹಾಗೂ ಆಸುಪಾಸಿನ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ ಎಂದು ಸಂಘಟನೆ ತಿಳಿಸಿದೆ.

ಮಾಹಿತಿಗಾಗಿ 9241215126, 8217779338

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)