ಶಾಲಾ ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಬಳಸಿಕೊಂಡ ಶಿಕ್ಷಕ ಸಸ್ಪೆಂಡ್

0
133

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕೊಪ್ಪಳ: ಕೊಪ್ಪಳದ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಶಿಕ್ಷಕ ಶಾಲಾ ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಬಳಸಿಕೊಂಡಿದ್ದು, ಶಿಕ್ಷಕನನ್ನು ಸಸ್ಪೆಂಡ್ ಮಾಡಲಾಗಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಹೊಸಳ್ಳಿ ಗ್ರಾಮದ ಶಿಕ್ಷಕ ಚಂದ್ರಶೇಖರ ಶಾಲೆಯ ಅವಧಿಯಲ್ಲಿ ವಿದ್ಯಾರ್ಥಿಗಳನ್ನ ಬಟ್ಟೆ ತೊಳೆಯುವುದಕ್ಕೆ ಬಳಸಿಕೊಂಡಿದ್ದ.ಈ ಬಗ್ಗೆವಾಹಿನಿಯೊಂದು ವರದಿ ಮಾಡಿತ್ತು.

ವರದಿ ಬಿತ್ತರವಾಗುತ್ತಿದ್ದಂತೆ ಬಿಇಓ ಸಿದ್ದಲಿಂಗಸ್ವಾಮಿ ಶಾಲೆಗೆ ಭೇಟಿ ನೀಡಿದ್ದರು. ಶಿಕ್ಷಕ ಚಂದ್ರಶೇಖರ ವಿದ್ಯಾರ್ಥಿಗಳನ್ನ ಮನೆಗೆಲಸಕ್ಕೆ ಬಳಸಿಕೊಂಡಿದ್ದು ಸಾಭೀತಾಗಿರುವ ಹಿನ್ನೆಲೆ ಡಿಡಿಪಿಐ ಎ.ಶ್ಯಾಮಸುಂದರ ಇಂದ ಅಮಾನತ್ತು ಆದೇಶ ಹೊರಡಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)