ವಾಟ್ಸಪ್ , ಫೇಸ್‌ಬುಕ್‌ ಬಂದ್ ಭಾರತದಲ್ಲಿ ನಿಷೇಧವಾಗುತ್ತ?- ಟೆಲಿಕಾಂ ಇಲಾಖೆ ಕೇಳಿದೆ ಅಭಿಪ್ರಾಯ

0
223

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಹೊಸದಿಲ್ಲಿ : ರಾಷ್ಟ್ರೀಯ ಭದ್ರತೆಗೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಗಂಡಾಂತರ ಎದುರಾಗುವಂತಹ ಸನ್ನಿವೇಶಗಳುಂಟಾದಾಗ ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸ್‌ಅ್ಯಪ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ಟೆಲಿಗ್ರಾಂ, ಮೊಂತಾದವುಗಳನ್ನು ಬ್ಲಾಕ್ ಮಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ತಾಂತ್ರಿಕ ಕ್ರಮಗಳ ಬಗ್ಗೆ ಟೆಲಿಕಾಂ ಇಲಾಖೆ ಸಂಬಂಧಿತರಿಂದ ಅಭಿಪ್ರಾಯ ಕೇಳಿದೆ.

ಜುಲೈ ೧೮ ರಂದು ಈ ಬಗ್ಗೆ ಎಲ್ಲಾ ಟೆಲಿಕಾಂ ಆಪರೇಟರುಗಳು, ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಸ್ ಆಸೋಸಿಯೇಶನ್ ಆಫ್ ಇಂಡಿಯಾ, ಸೆಲ್ಯೂಲರ್ ಆಪರೇಟರ್ಸ್ ಆಸೋಸಿಯೇಶನ್ ಆಫ್ ಇಂಡಿಯಾ ಮುಂತಾದ ಸಂಘಟನೆಗಳಿಗೆ ಟೆಲಿಕಾಂ ಇಲಾಖೆ ಪತ್ರ ಬರೆದು ಈ ಮೊಬೈಲ್ ಆಪ್ಲಿಕೇಶನ್ ಐಟಿ ಕಾಯ್ದೆಯ ಸೆಕ್ಷನ್ ೬೯ಎ ಅನ್ಯ ನಿರ್ಬಂಧಿಸುವ ಕುರಿತಂತೆ ಅವುಗಳ ಅಔಇಪ್ರಾಯ ಕೇಲಿದೆ.

ಐಟಿ ಕಾಯ್ದೆಯ ಸೆಕ್ಷನ್ ೬೯ಎ ಸಾರ್ವಜನಿಕರಿಗೆ ಯಾವುದೇಮಾಹಿತಿ ನಿರ್ಬಂದಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುತ್ತದೆ. ಇತ್ತೀಚಿಗೆ ದೇಶದಲ್ಲಿ ಸಂಭವಿಸಿರುವ ಹಲವಾರು ಗುಂಪು ಥಳಿತ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆಯೆನ್ನಲಾಗಿದೆ. ಹೆಚ್ಚಿನ ಗುಂಪು ಥಳಿತ ಘಟನೆಗಳಿಗೆ ವ್ಯಾಟ್ಸ್ ಅ್ಯಪ್ ನಕಲಿ ಸಂದೇಶಗಳು ಕಾರಣ ಎನ್ನಲಾಗುತ್ತಿದೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)