ಹೊಸದಿಲ್ಲಿ: ಮುಂಬೈ ಕಡಲತೀರದಲ್ಲಿ ‘ಪೋರ್ಚುಗೀಸ್ ಮ್ಯಾನ್ ಆಫ್ ವಾರ್’ ಎಂದು ಕರೆಯಲಾಗುವ ಬ್ಲೂಬಾಟಲ್ ಜೆಲ್ಲಿ ಮೀನುಗಳ ದಾಳಿಯಿಂದ೧೫೦ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪೋರ್ಚುಗೀಸ್ ಮ್ಯಾನ್ ಆಫ್ ವಾರ್ ಉದ್ದದ ಗ್ರಹಣಾಂಗಗಳನ್ನು ಹೊಂದಿದ್ದು, ಇದನ್ನು ಚುಚ್ಚಿ ವಿಷ ಬಿಡಿಸಿಕೊಳ್ಳುತ್ತದೆ. ಈ ವಿಷಮೀನುಗಳನ್ನು ಕೊಲ್ಲುವ ಸಾಮರ್ಥ ಹೊಂದಿದೆ. ಆದರೆಮಾನವನನ್ನು ಕೊಲ್ಲಲಾರದು.
ಕಳೆದ ಕೆಲವು ದಿನಗಳಿಂದ ಹಲವು ಜನರು ಈ ಮೀನಿನ ದಾಳಿಯಿಂದ ಗಾಯಗೊಂಡಿದ್ದಾರೆ. ಅವರಿಗೆ ಗಂಟೆಗಳ ಕಾಲ ತುರಿಸುವಿಕೆ ಹಾಗೂ ಮೋವಿನ ಅನುಭವವಾಗಿತ್ತು.
ಬ್ಲೂಬಾಟಲ್ ಜೆಲ್ಲಿ ಮೀನು ಸಾಮಾನ್ಯವಾಗಿ ಪ್ರತಿ ವರ್ಷ ಮಂಗಾರು ಋತುಮಾನದ ಸಂದರ್ಭ ಕಂಡು ಬರುತ್ತದೆ. ಆದರೆ, ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.