ನಾಲ್ವರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಗೋವುಗಳ ಕಳ್ಳತನಕ್ಕೆ ವಿಫಲ ಯತ್ನ- ಸಿಸಿಟಿವಿಯಲ್ಲಿ ಕೃತ್ಯ ಸೆರೆ

0
197

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಕುಂದಾಪುರ (ಉಡುಪಿ ಜಿಲ್ಲೆ) : ತಾಲೂಕಿನ ಬಸ್ರೂರು ಶ್ರೀ ಮಹಾಲಿಂಗೇಶ್ವರ ಪೆಟ್ರೋಲ್‌ ಬಂಕ್‌ ವಠಾರದಲ್ಲಿ ಸೋಮವಾರ ತಡರಾತ್ರಿ ನಾಲ್ವರು ಯುವಕರು ಗೋವುಗಳ ಕಳವಿಗೆ ವಿಫಲ ಯತ್ನ ನಡೆಸಿದ್ದು ಬಂಕ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

ಮಾರುತಿ ರಿಟ್ಜ್‌ ಕಾರಿನಲ್ಲಿ ಆಗಮಿಸಿದ ನಾಲ್ವರು ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದು, ಪೆಟ್ರೋಲ್‌ ಬಂಕ್‌ ವಠಾರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಜಾನುವಾರುಗಳ ಕಳವಿಗೆ ಪ್ರಯತ್ನ ನಡೆಸಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಕಳ್ಳರ ಕೈಯಿಂದ ತಪ್ಪಿಸಿಕೊಳ್ಳಲು ಗೋವುಗಳು ಪರದಾಡುವ ದೃಶ್ಯವೂ ಮನ ಮಿಡಿಯುವಂತಿವೆ. ಕಳವು ಯತ್ನದ ಸಂದರ್ಭದಲ್ಲಿ ಪೆಟ್ರೋಲ್‌ ಬಂಕ್‌ನಲ್ಲಿದ್ದ ಇಬ್ಬರು ಸಿಬ್ಬಂದಿ ಎಚ್ಚರಗೊಂಡು ಅವರನ್ನು ಹಿಡಿಯಲು ಯತ್ನಿಸಿದಾಗ ಕಳ್ಳರು ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ದೂರು ದಾಖಲು: ಗೋವು ಕಳವು ಯತ್ನ ಕುರಿತಂತೆ ಪೆಟ್ರೋಲ್‌ ಬಂಕ್‌ ಮಾಲೀಕ ಶ್ರೀಕಾಂತ್‌ ಕೆರೆಕಟ್ಟೆ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಂಕ್‌ ವಠಾರದಲ್ಲಿ ಆಸರೆ ಪಡೆದುಕೊಂಡಿದ್ದ ಬೀಡಾಡಿ ಜಾನುವಾರುಗಳ ಕಳವಿಗೆ ಅಪರಿಚಿತ ಯುವಕರು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಪ್ರಕರಣ ದಾಖಲಾಗಿದೆ.

ತನಿಖೆ: ಗೋವು ಕಳವು ಯತ್ನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಶೀಘ್ರ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಾಂತರ ಠಾಣೆ ಪಿಎಸ್‌ಐ ಶ್ರೀಧರ ನಾಯ್ಕ್‌ ತಿಳಿಸಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)