ಬೈಂದೂರು : ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯ ಗುದ್ದಲಿ ಪೂಜೆ

0
161

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

      

ಬೈಂದೂರು : ಸರಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ರಚನೆಯಾಗಲಿರುವ 2 ಕೊಠಡಿಯ ಗುದ್ದಲಿ ಪೂಜೆಯನ್ನು ಮಾನ್ಯ ಶಾಸಕರಾದ ಸುಕುಮಾರ ಶೆಟ್ಟಿ ನೇರವೆರಿಸಿ ಮಾತನಾಡಿದ ಅವರು ಶತಮಾನವನ್ನು ಕಂಡ ಈ ಶಾಲೆ ಅತೀ ಹೆಚ್ಚು ಮಕ್ಕಳನ್ನು ಹೊಂದಿದ್ದು ಉತ್ತಮವಾಗಿ ಉನ್ನತಿ ಹೊಂದಲಿ ಎಂದು ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ಜಿ.ಪಂ ಸದಸ್ಯರಾದ ಶಂಕರ ಪೂಜಾರಿಯವರು ಮಾತನಾಡಿ ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ಶಾಲೆಯ ಬೌತಿಕ ವ್ಯವಸ್ಥೆ ಉತ್ತಮವಾಗಿಸೋಣ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾಗರಾಜ ಗಾಣಿಗ ಅವರು ಶಾಲೆಯ ಅಭಿವೃದ್ಧಿಯಲ್ಲಿ ಒಂದಾಗಿ ದುಡಿದು ಶಾಸಕರ ಮಾದರಿ ಶಾಲೆಯನ್ನು ಉತ್ತಮವಾಗಿ ಮುನ್ನೆಡೆಸೋಣ ಎಂದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶ್ಯಾನುಭಾಗ್, ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಜಯನಂದಾ ಹೋಬಳಿದಾರ, ಉದ್ಯಮಿ ಬಿ.ಜಿ.ಕಮಲೇಶ್ ಬೆಸ್ಕೂರು, ಯಡ್ತರೆ ಗ್ರಾಮ ಪಂಚಾಯಿತ್ ಅಭಿವೃದ್ಧಿ ಅಧಿಕಾರಿ ಆರ್ ಎಸ್ ಗೌಡ, ಜಿ.ಪಂ ಅಭಿಯಂತರು ಶ್ರೀಕಾಂತ ನಾಯ್ಕ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಿತು.

ಹಳೆ ವಿದ್ಯಾರ್ಥಿ ಮುಖಂಡರಾದ ಆನಂದ ಶೆಟ್ಟಿ, ಗೋಪಾಲ ಗಾಣಿಗ, ಪ್ರಮುಖರಾದ ಗಿರೀಶ್ ಬೈಂದೂರು, ದೀಪಕ ಕುಮಾರ್ ಶೆಟ್ಟಿ, ಎಸ್.ಡಿ.ಎಮ್.ಸಿ ಸದಸ್ಯರು, ಯಡ್ತರೆ ಪಂಚಾಯಿತ್ ಸದ್ಯಸರಾದ ಗಣೇಶ ಪೂಜಾರಿ, ಶಂಕರ ದೇವಾಡಿಗ, ಹಳೆ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪದವೀಧರ ಮುಖ್ಯ ಶಿಕ್ಷಕರಾದ ಜರ್ನಾದನ ದೇವಾಡಿಗ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕರಾದ ಗಣಪತಿ ಹೋಬಳಿದಾರ್ ಮತ್ತು ಪ್ರಭಾಕರ ಹೆಚ್ ಕಾರ್ಯಕ್ರಮ ನಿರ್ವಹಿಸಿದರು, ನಾರಾಯಣ ದೇವಾಡಿಗ ವಂದಿಸಿದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)