ಸಿಗಡಿ ಕೆರೆಗೆ ವಿಷ ಪದಾರ್ಥ ಸಿಂಪಡಣೆ : ಸಿಗಡಿ ಬೆಳೆ ಸಂಪೂರ್ಣ ನಾಶ

0
147

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)

ಹೆಮ್ಮಾಡಿ: ಉಡುಪಿ ಜಿಲ್ಲೆಯ ಹೊಸಾಡು ಗ್ರಾಮದ ಅರಾಟೆಯಲ್ಲಿ ಬಂಟ್ವಾಡಿ ನರಸಿಂಹ ಮೊಗವೀರ ಎಂಬುವರ ಎರಡು ಸಿಗಡಿ ಕೆರೆಗಳಿಗೆ ಭಾನುವಾರ ರಾತ್ರಿ ವಿಷ ಪದಾರ್ಥ ಮಿಶ್ರಣವಾಗಿದೆ ಎನ್ನಲಾಗಿದ್ದು, 35 ಲಕ್ಷ ರೂ.ಗಳಿಗೂ ಹೆಚ್ಚು ಬೆಲೆಬಾಳುವ ಸಿಗಡಿ ಬೆಳೆ ಸಂಪೂರ್ಣ ನಾಶವಾಗಿರುವ ಘಟನೆ ನಡೆದಿದೆ.

ಕೆರೆಯಲ್ಲಿದ್ದ ಸಿಗಡಿಗಳು ಸಾಕಷ್ಟು ಬಲಿತಿದ್ದು, ಇನ್ನೆರಡು ದಿನಗಳಲ್ಲಿ ಮಾರುಕಟ್ಟೆಗೆ ಒಯ್ಯುವ ಸಿದ್ಧತೆ ನಡೆದಿತ್ತು. ಆದರೆ ಅಷ್ಟರಲ್ಲೇ ಕೆರೆಯ ನೀರಿನಲ್ಲಿ ವಿಷ ಬೆರೆತಿದ್ದರಿಂದ ಸಿಗಡಿಗಳು ಸತ್ತು ಕೆರೆಯ ನೀರಿನಲ್ಲಿ ತೇಲುತ್ತಿದ್ದುದು ಸೋಮವಾರ ಕಂಡುಬಂದಿದೆ. 10 ಲೀ. ದ್ರಾವಣ ತುಂಬುವ ಸಾಮರ್ಥ್ಯ‌ದ ಎರಡು ಹಣ್ಣಿನ ಬಕೆಟ್‌ಗಳು ಸ್ಥಳದಲ್ಲಿ ಪತ್ತೆಯಾಗಿದ್ದು, ಇದೇ ಬಕೆಟ್‌ಗಳಲ್ಲಿ ವಿಷ ಮಿಶ್ರಣ ಮಾಡಿ ಕೆರೆ ನೀರಿಗೆ ಬೆರೆಸಿರುವ ಬಗ್ಗೆ ಭಾರೀ ಶಂಕೆ ವ್ಯಕ್ತವಾಗಿದ್ದು, ವೈಯಕ್ತಿಕ ದ್ವೇಷ ಸಾಧನೆಯೇ ಕೃತ್ಯಕ್ಕೆ ಕಾರಣ ಎಂದು ಕೆರೆಯ ಮಾಲಕರು ಗಂಗೊಳ್ಳಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳು ಭೇಟಿ: ಉಡುಪಿ ಮೀನುಗಾರಿಕಾ ಇಲಾಖಾಧಿಕಾರಿ ವಿಶ್ವನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಮಂಜೂರಾತಿಗೆ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (1) ಸಮ್ಮತ (0) ಅಸಮ್ಮತ (0) ಖಂಡಿಸುವೆ (2) ಅಭಿಪ್ರಾಯವಿಲ್ಲ (0)