ನಕ್ಸಲ್‌ ಬಂಡುಕೋರರಿಂದ ನೆಲಬಾಂಬ್‌ ಸ್ಫೋಟ : ಕರ್ನಾಟಕದ ಇಬ್ಬರು ಯೋಧರ ಬಲಿ

0
146

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ರಾಯ್‌ಪುರ: ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ನಕ್ಸಲ್‌ ಬಂಡುಕೋರರು ನಡೆಸಿದ ನೆಲಬಾಂಬ್‌ ಸ್ಫೋಟಕ್ಕೆ ಕರ್ನಾಟಕ ಮೂಲದ ಇಬ್ಬರು ಬಿಎಸ್‌ಎಫ್‌ ಯೋಧರು ಹುತಾತ್ಮರಾಗಿದ್ದಾರೆ.

ಮೃತ ಯೋಧರನ್ನು ಸಂತೋಷ್‌ ಲಕ್ಷ್ಮಣ್‌ ಮತ್ತು ವಿಜಯಾನಂದ ನಾಯಕ್‌ ಎಂದು ಗುರುತಿಸಲಾಗಿದೆ. ಈ ಯೋಧರು ನಕ್ಸಲ್‌ ಹಾವಳಿ ಪೀಡಿತ ತಡಬೌಲಿ ಗ್ರಾಮ ಸಮೀಪದ ಅರಣ್ಯದಲ್ಲಿ ಸೋಮವಾರ ಸಂಜೆ ಬೈಕ್‌ನಲ್ಲಿ ಗಸ್ತು ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಬಿಎಸ್‌ಎಫ್‌ನ 121ನೇ ಬೆಟಾಲಿಯನ್‌ನ ಯೋಧರ ಬೈಕ್‌ ಗಸ್ತು ತಂಡವನ್ನು ಗುರಿಯಾಗಿಟ್ಟುಕೊಂಡೇ ನಕ್ಸಲರು ಸ್ಫೋಟ ನಡೆಸಿದರು. ಸ್ಫೋಟದ ರಭಸಕ್ಕೆ ಬೈಕ್‌ ಗಾಳಿಯಲ್ಲಿ ಚಿಮ್ಮಿ ಬಿದ್ದಿದ್ದು ಯೋಧರಿಬ್ಬರೂ ತೀವ್ರವಾಗಿ ಗಾಯಗೊಂಡರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಹೆಚ್ಚುವರಿ ಪಡೆಗಳನ್ನು ಅರಣ್ಯಕ್ಕೆ ರವಾನಿಸಲಾಗಿದ್ದು ಬಂಡುಕೋರರ ವಿರುದ್ಧದ ಕಾರ್ಯಾಚರಣೆಯನ್ನು ತ್ವರಿತಗೊಳಿಸಲಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)