ಗದ್ದಯಲ್ಲಿ ನಾಟಿ ಮಾಡಿ ಉತ್ತಮ ಕ್ರಷಿಕರಾಗುತ್ತೇವೆ ಎಂದ ಕಾಲ್ತೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು

0
251

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (11) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

   

ಕಾಲ್ತೋಡು : ಕಾಲ್ತೋಡು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆ  ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲೆ ಸಮೀಪದ ಗದ್ದಯಲ್ಲಿ ನಾಟಿ ಮಾಡುವ ಮೂಲಕ  ನಾವು ಕೂಡ ವಿಧ್ಯಾವಂತರಾಗಿ ಬದುಕನ್ನು ಕಟ್ಟಿಕೊಂಡು ಉತ್ತಮ ಕ್ರಷಿಕರಾಗಿ ಬದುಕಿ ತೋರಿಸುತ್ತೇವೆ ಎಂದು ಒಂದು ಉತ್ತಮವಾದ ಸಂದೇಶವನ್ನು ಸಮಾಜಕ್ಕೆ ನೀಡಿದರು.

ಗಂಟೆ ಗಂಟೆಗೂ ವಾಟ್ಸಪ್ ಫೇಸ್ ಬುಕ್ ನಲ್ಲಿ ಸ್ಟೇಟಸ್ ಬದಲಿಸುವ ಇಂದಿನ ಮಾರ್ಡನ್ ಮೆಂಟಾಲಿಟಿ ಮಕ್ಕಳಿಗೆ ಈ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ. ಅಕ್ಕಿ ಹೇಗೆ ಉತ್ಪತ್ತಿಯಾಗುತ್ತದೆ ಎಂದರೆ ಅಂಗಡಿಯಲ್ಲಿ ಎಂಬ ಉತ್ತರಿಸುವ ಇಂದಿನ ನಗರ ಪ್ರದೇಶದ ಮಕ್ಕಳ ನಡುವೆ ಕೆಸರು ಗದ್ದೆಗಿಳಿದು, ತಾವೇ ನಾಟಿ ಮಾಡಿ ಹಳ್ಳಿ ಪ್ರದೇಶದಿಂದ ನಗರ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವ ನಿರುದ್ಯೋಗ ಯುವಕರಿಗೆ ಮಾದರಿಯಾದರು.

ಈ ಸಂದರ್ಭದಲ್ಲಿ ಊರಿನ ಹಿರಿಯರಾದ ನಾಗೇಶ್ ಗಾಣಿಗ,ಚಪ್ಪರಿಕೆ ಶಾಲಾ ಮುಖ್ಯೋಪಾಧ್ಯಾಯ ಶೇಖರ ಗಾಣಿಗ ಬೀಜಮಕ್ಕಿ, ಪ್ರವೀಣ್ ಪೂಜಾರಿ ಚಪ್ಪರಿಕೆ ಉಪಸ್ಥಿತರಿದ್ದರು.

ಹೆಚ್ಚಿನ ಓದುಗರು ಈ ಸುದ್ದಿಯನ್ನು ಶಭಾಷ್ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (11) ಸಮ್ಮತ (2) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)