ಅಧಿಕಾರಿಗಳ ಮನವೊಲಿಕೆಯಿಂದ ಮತ್ತೆ ಕರ್ತವ್ಯಕ್ಕೆ ಹಾಜರಾದ ಎಸ್ ಐ ಮಹಾಬಲ ಶೆಟ್ಟಿ

0
137

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

ಉಡುಪಿ: ಮೇಲಧಿಕಾರಿಗಳ ಕಿರುಕುಳದ ಹಿನ್ನೆಲೆ ಎಸ್ ಐ ಮಹಾಬಲ ಶೆಟ್ಟಿ ಅವರು ಸ್ವನಿವೃತ್ತಿ ಪಡೆದಿದ್ದು, ಈಗ ಅಧಿಕಾರಿಗಳ ಮನವೊಲಿಕೆಯಿಂದ ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕಳೆದ ಶುಕ್ರವಾರ ಮೇಲಧಿಕಾರಿಗಳ ಕಿರುಕುಳವೆಂದು ವಿ ಆರ್ ಎಸ್ ಪತ್ರ ಬರೆದಿಟ್ಟು ಎಸ್ ಐ ಮಹಾಬಲ ಶೆಟ್ಟಿ ಅವರು ಠಾಣೆಯಿಂದ ಹೊರನಡೆದಿದ್ದರು. ಮೇಲಧಿಕಾರಿಗಳ ಕಿರುಕುಳಕ್ಕೆ ಸ್ಚನಿವೃತ್ತಿ ಪಡೆದ ಮಹಾಬಲ ಅವರನ್ನು‌ ಬೆಂಬಲಿಸಿ ಪ್ರತಿಭಟನೆ ನಡೆದಿದ್ದು, ಬಂದ್ ಗೆ ಎಚ್ಚರಿಕೆ ಕೂಡ ನೀಡಲಾಗಿತ್ತು.

ಇದೀಗ ಹಿರಿಯ‌ ಅಧಿಕಾರಿಗಳ ಮನವೊಲಿಕೆಯಿಂದ ಮತ್ತೆ ಎಸ್ ಐ ಮಹಾಬಲ‌ ಶೆಟ್ಟಿ ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯ ಚಾರ್ಜ್ ತೆಗೆದುಕೊಂಡ ಮಹಾಬಲ‌ ಶೆಟ್ಟಿ ಇಂದಿನಿಂದ ಕರ್ತವ್ಯ ಮುಂದುವರೆಸಲಿದ್ದಾರೆ.

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)