ಉಪ್ಪುಂದ: ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

0
191

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)

 

ಉಪ್ಪುದ, ಜು 9: ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ,ಜಿ.ಶಂಕರ ಪ್ಯಾಮಿಲಿ ಟ್ರಸ್ಟ್ (ರಿ.)ಅಂಬಲಪಾಡಿ ಉಡುಪಿ,ಕೆಎಂಸಿ. ಆಸ್ಪತ್ರೆ ಮಣಿಪಾಲ, ಜಿಲ್ಲಾಡಳಿತ ಉಡುಪಿ,ರೋಟರಿ ಕ್ಲಬ್ ಬೈಂದೂರು,ಇನ್ನರ್ ವ್ಹೀಲ್ ಕ್ಲಬ್ ಬೈಂದೂರು, ಶ್ರೀ ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ ಬೈಂದೂರು , ವಜ್ರದುಂಬಿ ಗೆಳೆಯರ ಬಳಗ ಬಿಜೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರ ರವಿವಾರ ಉಪ್ಪುಂದದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಸಿರಿ ಸಭಾಭವನದಲ್ಲಿ ನಡೆಯಿತು.

ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ವಿನಯ ಕರ್ಕೆರ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ರಕ್ತದಾನ ಅತ್ಯಂತ ಪವಿತ್ರವಾದ ಸೇವೆ. ಜೀವನ್ಮರಣ ಹೋರಾಟದಲ್ಲಿರುವವರಿಗೆ ತಕ್ಷಣ ರಕ್ತ ದೊರೆತಾಗ ಜೀವ ಉಳಿಸಿದ ಪುಣ್ಯಪ್ರಾಪ್ತಿ ಬರುತ್ತದೆ.ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಕಳೆದ ಹಲವು ವರ್ಷಗಳಿಂದ ಇಂತಹ ಶಿಬಿರಗಳು ನಡೆಸುತ್ತಿರುವುದು ಸಂಘ ಸಂಸ್ಥೆಗಳು ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಐ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕ ಅಧ್ಯಕ್ಷ ವಸಂತ ಬಿ.ತಗ್ಗರ್ಸೆ, ಉಪ್ಪುಂದ ಗ್ರಾ.ಪಂ. ಮಾಜಿ ಅಧ್ಯಕ್ಷ ಜಗನ್ನಾಥ ಎಮ್, ಗೌರವಾಧ್ಯಕ್ಷ ಮದನ್ ಕುಮಾರ್ ಉಪ್ಪುಂದ, ಜಿಲ್ಲಾ ಉಪಾಧ್ಯಕ್ಷ ಕೃಷ್ಣ ಮೊಗವೀರ,ರಕ್ತನಿಧಿ ಕೆಎಂಸಿ ಮಣಿಪಾಲ ವೈದ್ಯಾಧಿಕಾರಿ ಡಾ| ಗಣೇಶ ಮೋಹನ್,ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಕೆ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ,ಮುರಳಿಧರ ಖಾರ್ವಿ,ಬಿಜೂರು ವಜ್ರದುಂಬಿ ಗೆಳೆಯರ ಸಂಘ ಅಧ್ಯಕ್ಷ ರಾಘವೇಂದ್ರ ಬೈಟು, ಮಾರಿಕಾಂಬಾ ಯೂತ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಆಚಾರ್ಯ,ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ, ಶಿರೂರು ಜೆಸಿಐ ಅಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಅಳ್ವೆಕೋಡಿ ಕಿನಾರ ಫ್ರೇಂಡ್ಸ್ ಅಧ್ಯಕ್ಷ ನಾಗೇಶ ಖಾರ್ವಿ,ರಾಮಕೃಷ್ಣ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂರಾರು ಸಾರ್ವಜನಿಕರು ರಕ್ತದಾನದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.

ಶಿಕ್ಷಕ ಉಪ್ಪುಂದ ಸುಬ್ರಹ್ಮಣ್ಯ ಗಾಣಿಗ ಸ್ವಾಗತಿಸಿದರು.ಉಪನ್ಯಾಸಕ ತಗ್ಗರ್ಸೆ ಪಾಂಡುರಂಗ ಮೊಗೇರ್ ಕಾರ್ಯಕ್ರಮ ನಿರ್ವಹಿಸಿದರು. ಮೊಗವೀರ ಯುವ ಸಂಘಟನೆ ಬೈಂದೂರು -ಶಿರೂರು ಘಟಕದ ಕಾರ್ಯದರ್ಶಿ ರವಿರಾಜ್ ಚಂದನ್ ಕಳವಾಡಿ ವಂದಿಸಿದರು.

ವರದಿ : ಕೃಷ್ಣ ಬಿಜೂರು

ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (0) ಅಭಿಪ್ರಾಯವಿಲ್ಲ (0)