ಶಾಲೆಬಾಗಿಲು: ಯೂಟರ್ನ್ ಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ

0
281

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)

  

ಉಪ್ಪುಂದ ಜು 9: ರಾ.ಹೆದ್ದಾರಿ ಉಪ್ಪುಂದ-ಶಾಲೆಬಾಗಿಲು ಜಂಕ್ಷನ್‍ನಲ್ಲಿ ಯೂಟರ್ನ್ ಕಲ್ಪಿಸುವಂತೆ ಆಗ್ರಹಿಸಿ ಉಪ್ಪುಂದ ಗ್ರಾಮಸ್ಥರು, ಆಟೋ ಚಾಲಕರು, ಮಾಲಕರು ಹಾಗೂ ನಾನಾ ಸಂಘಸಂಸ್ಥೆಗಳ ನೇತೃತ್ವದಲ್ಲಿ ರವಿವಾರ ಬೃಹತ್ ಪ್ರತಿಭಟನೆ ನಡೆಯಿತು.

ಹೆದ್ದಾರಿ ಚತುಷ್ಪಥ ಕಾಮಗಾರಿ ಸಂದರ್ಭ ಈ ಭಾಗದಲ್ಲಿ ಯೂಟರ್ನ್ ನೀಡದಿದ್ದರೆ ತಾರಾಪತಿ, ಅಳ್ವೆಕೋಡಿ, ಬಿಜೂರು, ದೀಟಿ, ಸಾಲಿಮಕ್ಕಿ, ಬಾಯಂಹಿತ್ಲು ಮುಂತಾದ ಪ್ರದೇಶಗಳ ನಿವಾಸಿಗಳು ಹಾಗೂ ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸುಮಾರು ಕಿ.ಮೀ. ದೂರ ಸುತ್ತಿ ಬಳಸಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಹೀಗಾಗಿ ಈ ಭಾಗದ ಜನತೆಗೆ ಅನುಕೂಲ ಕಲ್ಪಿಸುವ ನೆಲೆಯಲ್ಲಿ ಇಲ್ಲಿ ತಾತ್ಕಲಿಕವಾಗಿ ನೀಡಿದ ಯೂಟರ್ನ್‍ನನ್ನು (ತಿರುವು) ಶಾಶ್ವತವಾಗಿ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಇಲ್ಲಿನ ನಿವಾಸಿಗಳ ಬೇಡಿಕೆಯಂತೆ ಯೂಟರ್ನ್ ನೀಡಲು ಅಗತ್ಯ ಕ್ರಮ ಕೈಗೊಳ್ಳುವಚಿತೆ ಗುತ್ತಿಗೆದಾರ ಕಂಪೆನಿಗೆ ಸೂಚನೆ ನೀಡಿದರು.

ತಹಶೀಲ್ದಾರ ಕಿರಣ ಗೌರಯ್ಯ, ಸ್ಥಳೀಯ ಮುಖಂಡರಾದ ಬಿ.ಎಸ್. ಸುರೇಶ ಶೆಟ್ಟಿ, ಜಿ. ಗೋಕುಲ್ ಶೆಟ್ಟಿ, ಉಪ್ಪುಂದ ಗ್ರಾ.ಪಂ. ಸದಸ್ಯ ಮಂಜು ದೇವಾಡಿಗ,ದೀಪಕ್‍ಕುಮಾರ ಶೆಟ್ಟಿ,  ಶ್ರೀಧರ ಬಿಜೂರು, ದಿವಾಕರ ಶೆಟ್ಟಿ, ಉಪ್ಪುಂದ ಗಣೇಶ ಗಾಣಿಗ, ಪುರುಷೋತ್ತಮ ದಾಸ್ ಉಪ್ಪುಂದ, ಬಿಜೂರು ಗ್ರಾ.ಪಂ.ಸದಸ್ಯ ರಮೇಶ ದೇವಾಡಿಗ, ಆಟೋ ಚಾಲಕರು, ಮಾಲಕರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಈ ಭಾಗದ ಜನರ ಸಂಚಾರಕ್ಕೆ ತೊಂದರೆಯಾಗದಂತೆ ಈಗ ತಾತ್ಕಲಿಕ ಯೂಟರ್ನ್ ವ್ಯವಸ್ಥೆ ನೀಡಲಾಗಿದ್ದು, ಅದನ್ನು ಶಾಶ್ವತಗೊಳಿಸಬೇಕಾದರೆ ಶಾಸಕರು ಹಾಗೂ ಸಂಸದರ ಜತೆಗೂಡಿ  ಹೆದ್ದಾರಿ ಪ್ರಾಧಿಕಾರದ ಪ್ರೋಜೆಕ್ಟ್ ಡೈರೆಕ್ಟರ್ ಅವರ ಮೇಲೆ ಒತ್ತಡ ತಂದು ಅನುಮತಿ ಪಡೆಯಬೇಕಾಗುತ್ತದೆ – ಯೋಗೇಂದ್ರಪ್ಪ ಐಆರ್‍ಬಿ. ಪ್ರೋಜೆಕ್ಟ್ ಮ್ಯಾನೇಜರ್.

ವರದಿ : ಕೃಷ್ಣ ಬಿಜೂರು

ಹೆಚ್ಚಿನ ಓದುಗರು ಈ ಸುದ್ದಿಯನ್ನು ಖಂಡಿಸುವೆ ಎಂದು ಪರಿಗಣಿಸಿದ್ದಾರೆ !
ಈ ವರದಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.
ಶಭಾಷ್ (0) ಸಮ್ಮತ (0) ಅಸಮ್ಮತ (0) ಖಂಡಿಸುವೆ (1) ಅಭಿಪ್ರಾಯವಿಲ್ಲ (0)